ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಗಡಿ ದಾಟಿದ ಸ್ಮೃತಿ ಮಂದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2025, 14:39 IST
Last Updated 28 ಡಿಸೆಂಬರ್ 2025, 14:39 IST
   

ತಿರುವನಂತಪುರ: ಭಾರತ ಮಹಿಳಾ ಕ್ರಿಕೆಟ್‌ ತಾರೆ ಸ್ಮೃತಿ ಮಂದಾನ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಗಡಿ ದಾಟಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ 27 ರನ್‌ ಗಳಿಸಿದ್ದಾಗ, ಸ್ಮೃತಿ ಮಂದಾನ ಈ ಸಾಧನೆ ಮಾಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 157 ಟಿ–20 ಪಂದ್ಯಗಳಿಂದ 4,094 ರನ್, 117 ಏಕದಿನ ಪಂದ್ಯಗಳಲ್ಲಿ 5,322 ರನ್ ಹಾಗೂ 7 ಟೆಸ್ಟ್ ಪಂದ್ಯಗಳಿಂದ 629 ರನ್‌ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಕೂಡ ಸೇರಿವೆ.

ADVERTISEMENT

ಮಹಿಳಾ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ್ತಿಯಾಗಿದ್ದಾರೆ. ಭಾರತದ ಪರ ಈ ದಾಖಲೆ ಬರೆದ ಎರಡನೇ ಬ್ಯಾಟರ್ ಎನ್ನವ ಖ್ಯಾತಿಗೆ ಸ್ಮೃತಿ ಭಾಜನರಾಗಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎನ್ನುವ ದಾಖಲೆಯು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್‌ (10,868 ರನ್‌) ಅವರ ಹೆಸರಿನಲ್ಲಿದೆ. ಅವರ ನಂತರ ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ (10,652 ರನ್‌) ಹಾಗೂ ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ (10,273 ರನ್‌) ಅವರು 10 ಸಾವಿರ ರನ್‌ ಗಡಿ ದಾಟಿದ್ದಾರೆ.

ವೆಸ್ಟ್‌ ಇಂಡೀಸ್‌ನ ಬ್ಯಾಟರ್‌ ಸ್ಟಾಫಾನಿ ಟೇಲರ್ (9,301 ರನ್‌) ಹಾಗೂ ಆಸೀಸ್‌ ಬ್ಯಾಟರ್ ಮೆಗ್‌ ಲ್ಯಾನಿಂಗ್‌ (8,352 ರನ್‌) ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮೃತಿ ಮಂದಾನ ಅವರ ನಂತರದ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.