ADVERTISEMENT

ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2025, 8:18 IST
Last Updated 9 ಡಿಸೆಂಬರ್ 2025, 8:18 IST
   

ಬೆಂಗಳೂರು: ಮದುವೆ ರದ್ಧಾದ ನಂತರ ಪಲಾಶ್ ಜೊತೆಗಿನ ಎಲ್ಲಾ ಪೋಸ್ಟ್‌ ಅಳಿಸಿ ಹಾಕಿದ್ದ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂದಾನ, ಒಂದೇ ಒಂದು ಪೋಸ್ಟ್‌ ಅನ್ನು ಹಾಗೆ ಉಳಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಪಲಾಶ್ ಹುಟ್ಟುಹಬ್ಬದ ಪ್ರಯುಕ್ತ ಸ್ಮೃತಿ ಈ ಪೋಸ್ಟ್‌ ಹಂಚಿಕೊಂಡಿದ್ದರು. ‘ನನ್ನ ಆತ್ಮಸಂಗಾತಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದರು.

ನವೆಂಬರ್ 23ರಂದು ನಿಗದಿಯಾಗಿದ್ದ ಮದುವೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಇದಾದ ಬಳಿಕ ಮದುವೆ ಸಮಾರಂಭ ಸೇರಿದಂತೆ ಪಲಾಶ್ ಜೊತೆಗಿನ ಎಲ್ಲಾ ಪೋಸ್ಟ್‌ಗಳನ್ನು ಸ್ಮೃತಿ ಅಳಿಸಿ ಹಾಕಿದ್ದರು. ಸೋಮವಾರ ಮದುವೆ ರದ್ದಾಗಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಮೃತಿ ಅದಾದ ಬಳಿಕವೂ ಆ ಒಂದು ಪೋಸ್ಟ್‌ ಅಳಿಸಿ ಹಾಕಿಲ್ಲ.

ADVERTISEMENT

ಈ ಬಗ್ಗೆ ಕಾಮೆಂಟ್ ಮಾಡಿರುವ ಸ್ಮೃತಿ ಅಭಿಮಾನಿಗಳು, ಪೋಸ್ಟ್ ಅಳಿಸಿ ಹಾಕುವಂತೆ ಒತ್ತಾಯಿಸಿದ್ದಾರೆ. ಇನ್ನು ಕೆಲವರು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಒಂದಾಗುವಂತೆ ಸಲಹೆ ನೀಡಿದ್ದಾರೆ.

ಅದಾಗ್ಯೂ, ಪೋಸ್ಟ್ ಅಳಿಸಿ ಹಾಕದೇ ಇರಲು ಕಾರಣವೇನು ಎಂಬ ಬಗ್ಗೆ ಸ್ಮೃತಿ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ. ಕಣ್ತಿಪ್ಪಿನಿಂದ ಪೋಸ್ಟ್ ಹಾಗೇ ಉಳಿದುಕೊಂಡಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದಲ್ಲದೇ, ಪಲಾಶ್ ಅವರ ಸಹೋದರಿ ಪಾಲಕ್ ಮುಚ್ಚಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಪೋಸ್ಟ್ ಕೂಡ ಸ್ಮೃತಿ ಖಾತೆಯಲ್ಲಿ ಉಳಿದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.