ADVERTISEMENT

ದಕ್ಷಿಣ ಆಫ್ರಿಕಾ ‘ಎ’ ಎದುರಿನ ಟೆಸ್ಟ್ ಪಂದ್ಯ: ಉತ್ತಮ ಮೊತ್ತದತ್ತ ಭಾರತ ‘ಎ’ ತಂಡ

ದಕ್ಷಿಣ ಆಫ್ರಿಕಾ ‘ಎ’ ಎದುರಿನ ಟೆಸ್ಟ್ ಪಂದ್ಯ: ಹನುಮ, ಇಶಾನ್ ಉತ್ತಮ ಆಟ

ಪಿಟಿಐ
Published 1 ಡಿಸೆಂಬರ್ 2021, 21:15 IST
Last Updated 1 ಡಿಸೆಂಬರ್ 2021, 21:15 IST
ಹನುಮ ವಿಹಾರಿ –ಎಎಫ್‌ಪಿ ಚಿತ್ರ
ಹನುಮ ವಿಹಾರಿ –ಎಎಫ್‌ಪಿ ಚಿತ್ರ   

ಬ್ಲೂಮ್‌ಫೌಂಟೇನ್‌: ಆತಿಥೇಯ ದಕ್ಷಿಣ ಆಫ್ರಿಕಾ ‘ಎ’ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಭಾರತ ‘ಎ’ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಇರಿಸಿದೆ. ಎದುರಾಳಿಗಳನ್ನು ಮೊದಲ ಇನಿಂಗ್ಸ್‌ನಲ್ಲಿ 297 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ‘ಎ’ ತಂಡ ಎರಡನೇ ದಿನ 57 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 198 ರನ್ ಗಳಿಸಿದ್ದು 99 ರನ್‌ಗಳಿಂದ ಹಿಂದೆ ಉಳಿದಿದೆ.

ಪೃಥ್ವಿ ಶಾ (42; 54 ಎಸೆತ, 6 ಬೌಂಡರಿ) ನಾಯಕ ಪ್ರಿಯಾಂಕ್ ಪಾಂಚಾಲ್ ಜೊತೆಗೂಡಿ ಮೊದಲ ವಿಕೆಟ್‌ಗೆ ಉತ್ತಮ ಆಟವಾಡಿದರು. ಇವರಿಬ್ಬರು 57 ರನ್‌ಗಳನ್ನು ಕಲೆ ಹಾಕಿದರು. ಪ್ರಿಯಾಂಕ್ ಔಟಾದ ನಂತರ ಅಭಿಮನ್ಯು ಈಶ್ವರನ್ ಶೂನ್ಯಕ್ಕೆ ಮರಳಿದರು. ಪೃಥ್ವಿ ಶಾ ಬೆನ್ನಲ್ಲೇ ಬಾಬಾ ಅಪರಾಜಿತ್ ಕೂಡ ಖಾತೆ ತೆರೆಯದೆ ಮರಳಿದರು.

ನಂತರ ಹನುಮ ವಿಹಾರಿ (42; 129 ಎ, 6 ಬೌಂ) ಮತ್ತು ಇಶಾನ್ ಕಿಶನ್ (49; 71 ಎ, 9 ಬೌಂ) ಅವರ ಆಟ ರಂಗೇರಿತು. ಐದನೇ ವಿಕೆಟ್‌ಗೆ ಇವಿರಬ್ಬರು 78 ರನ್ ಸೇರಿಸಿದರು. ಸರ್ಫರಾಜ್ ಖಾನ್ ಕೂಡ ಮಿಂಚಿದರು.

ADVERTISEMENT

ಮೊದಲ ದಿನವಾದ ಮಂಗಳವಾರ ಏಳು ವಿಕೆಟ್ ಕಳೆದುಕೊಂಡು 233 ರನ್ ಕಲೆ ಹಾಕಿದ್ದ ಆತಿಥೇಯ ತಂಡದ ಪರ ಬುಧವಾರ ಮಾರ್ಕೊ ಜಾನ್ಸೆನ್ (70; 123ಎ, 8 ಬೌಂ, 1 ಸಿ) ಮಿಂಚಿದರು. ಮೊದಲ ದಿನ ತಲಾ ಎರಡು ವಿಕೆಟ್ ಉರುಳಿಸಿದ್ದ ಸೈನಿ ಮತ್ತು ಪೊರೆಲ್ ಮತ್ತೆ ಒಂದೊಂದು ವಿಕೆಟ್ ಪಡೆದುಕೊಂಡರು. ಕೊನೆಯ ವಿಕೆಟ್‌ಗೆಜಾನ್ಸೆನ್‌ ಮತ್ತು ಗ್ಲೆಂಟನ್ ಸ್ಟುರ್‌ಮನ್ 28 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು:

ದಕ್ಷಿಣ ಆಫ್ರಿಕಾ ‘ಎ’, ಮೊದಲ ಇನಿಂಗ್ಸ್‌:105.5 ಓವರ್‌ಗಳಲ್ಲಿ 297 (ಮಂಗಳವಾರ 85 ಓವರ್‌ಗಳಲ್ಲಿ 7ಕ್ಕೆ 233 (ಮಾರ್ಕೊ ಜಾನ್ಸೆನ್‌ ಔಟಾಗದೆ 70, ಗ್ಲೆಂಟೆನ್ ಟರ್ಮನ್ 27; ನವದೀಪ್ ಸೈನಿ 67ಕ್ಕೆ3, ಅರ್ಜಾನ್ ನಾಗಸ್ವಾಲ 60ಕ್ಕೆ1, ಇಶಾನ್ ಪೊರೆಲ್ 49ಕ್ಕೆ3, ಸೌರಭ್ ಕುಮಾರ್‌ 75ಕ್ಕೆ1, ಬಾಬಾ ಅಪರಾಜಿತ್‌ 34ಕ್ಕೆ1);

ಭಾರತ ‘ಎ’: 57 ಓವರ್‌ಗಳಲ್ಲಿ 5ಕ್ಕೆ 198 (ಪೃಥ್ವಿ ಶಾ 42, ಪ್ರಿಯಾಂಕ್ ಪಾಂಚಾಲ್ 24, ಹನುಮ ವಿಹಾರಿ ಬ್ಯಾಟಿಂಗ್‌ 45, ಇಶಾನ್ ಕಿಶನ್ 49, ಸರ್ಫರಾಜ್ ಖಾನ್ ಬ್ಯಾಟಿಂಗ್ 30; ಗ್ಲೆಂಟನ್ ಟುರ್‌ಮನ್46ಕ್ಕೆ2, ಲೂಥೊ ಸಿಪಾಮ್ಲ 44ಕ್ಕೆ1, ಮಾರ್ಕೊ ಜಾನ್ಸೆನ್ 20ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.