ನ್ಯೂಜಿಲೆಂಡ್ ತಂಡದ ಆಟಗಾರ
ಹ್ಯಾಮಿಲ್ಟನ್ (ನ್ಯೂಜಿಲೆಂಡ್), (ಎಪಿ): ಡೇನ್ ಪೀಟ್ ಅವರ ಜೀವನ ಶ್ರೇಷ್ಠ ಬೌಲಿಂಗ್ (89ಕ್ಕೆ5) ನೆರವಿನಿಂದ ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಬುಧವಾರ ಆತಿಥೇಯ ನ್ಯೂಜಿಲೆಂಡ್ ತಂಡದ ಮೇಲೆ 31 ರನ್‌ಗಳ ಅನಿರೀಕ್ಷಿತ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.
6 ವಿಕೆಟ್‌ಗೆ 220 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ 242 ರನ್‌ಗಳಿಗೆ ಉರುಳಿತು. ಉತ್ತರವಾಗಿ ನ್ಯೂಜಿಲೆಂಡ್ 77.3 ಓವರುಗಳಲ್ಲಿ 211 ರನ್‌ಗಳಿಗೆ ಪತನಗೊಂಡಿತು. ಒಂದು ಹಂತದಲ್ಲಿ 183 ರನ್‌ಗಳಿಗೆ 9 ವಿಕೆಟ್‌ಗಳು ಉರುಳಿದ್ದವು. ಆದರೆ ನೀಲ್ ವ್ಯಾಗ್ನರ್ ಕೊನೆಯಲ್ಲಿ 33 ರನ್ ಬಾರಿಸಿದ್ದರಿಂದ ತಂಡ 200 ದಾಟಲು ಮತ್ತು ಹಿನ್ನಡೆ ಕಡಿಮೆಯಾಗಲು ಸಾಧ್ಯವಾಯಿತು.
ಸ್ಕೋರುಗಳು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 242 (ರುವಾನ್ ಡಿ ಸ್ವಾರ್ಟ್ 64, ಶಾನ್ ವಾನ್ ಬರ್ಗ್ 38; ವಿಲಿಯಂ ಒ ರೂರ್ಕೆ 59ಕ್ಕೆ4, ರಚಿನ್ ರವೀಂದ್ರ 33ಕ್ಕೆ3); ನ್ಯೂಜಿಲೆಂಡ್: 77.3 ಓವರುಗಳಲ್ಲಿ 211 (ಟಾಮ್ ಲೇಥಮ್ 40, ಕೇನ್ಸ್ ವಿಲಿಯಮ್ಸನ್ 43, ರಚಿನ್ ರವೀಂದ್ರ 29, ವಿಲ್ ಯಂಗ್ 36, ನೀಲ್ ವ್ಯಾಗ್ನರ್ 33; ಡೇನ್ ಪೀಟರ್ಸನ್ 39ಕ್ಕೆ3, ಡೇನ್ ಪೀಟ್ 89ಕ್ಕೆ5).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.