ಹರಾರೆ: ದಕ್ಷಿಣ ಆಫ್ರಿಕಾ ತಂಡವು ಸೋಮವಾರ ಇಲ್ಲಿ ನಡೆದ ಟಿ20 ಅಂತರರಾಷ್ಟ್ರೀಯ ತ್ರಿಕೋನ ಸರಣಿಯ ಉದ್ಘಾಟನಾ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು ನಾಯಕ ಸಿಕಂದರ್ ರಝಾ (ಔಟಾಗದೇ 54;38ಎ) ಅವರ ಅಜೇಯ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 141 ರನ್ ಗಳಿಸಿತ್ತು.
ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 25 ಎಸೆತಗಳು ಬಾಕಿ ಇರುವಂತೆ ಐದು ವಿಕೆಟ್‌ಗೆ 142 ರನ್ ಗಳಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ನಾಯಕ ರಾಬಿನ್ ಹರ್ಮನ್ (45;37ಎ) ಮತ್ತು ಡೆವಾಲ್ಡ್ ಬ್ರೆವಿಸ್ (41;17ಎ) ಉಪಯುಕ್ತ ಕಾಣಿಕೆ ನೀಡಿದರು.
ನ್ಯೂಜಿಲೆಂಡ್ ತಂಡವು ಬುಧವಾರ ಇದೇ ತಾಣದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.
ಸಂಕ್ಷಿಪ್ತ ಸ್ಕೋರ್:
ಜಿಂಬಾಬ್ವೆ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 141 (ಸಿಕಂದರ್ ರಝಾ ಔಟಾಗದೇ 54, ಬ್ರಿಯಾನ್ ಬೆನೆಟ್ 30; ಜಾರ್ಜ್ ಲಿಂಡೆ 10ಕ್ಕೆ 3).
ದಕ್ಷಿಣ ಆಫ್ರಿಕಾ: 15.5 ಓವರ್‌ಗಳಲ್ಲಿ 5 ವಿಕೆಟ್‌ಗೆ 142 (ರಾಬಿನ್ ಹರ್ಮನ್ 45, ಡೆವಾಲ್ಡ್ ಬ್ರೆವಿಸ್ 41).
ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ ಐದು ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.