
ದಕ್ಷಿಣ ಆಫ್ರಿಕಾ ತಂಡದ ಏಡನ್ ಮರ್ಕರಂ
ಪಿಟಿಐ ಚಿತ್ರ
ನ್ಯೂಯಾರ್ಕ್: ಏಡನ್ ಮರ್ಕರಂ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಡಿ ಗುಂಪಿನಲ್ಲಿ ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ.
ಸೋಮವಾರ ನಾಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ಎದುರು ಕಣಕ್ಕಿಳಿಯಲಿದೆ.
ದಕ್ಷಿಣ ಆಫ್ರಿಕಾ ತಂಡವು ತನ್ನ ಕಳೆದೆರಡೂ ಪಂದ್ಯಗಳಲ್ಲಿ ಜಯಿಸಿದೆ. ಆದರೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡದ ಕೊರಗಿನಲ್ಲಿದೆ. ಕ್ವಿಂಟನ್ ಡಿಕಾಕ್, ಹೆನ್ರಿಚ್ ಕ್ಲಾಸೆನ್, ಮರ್ಕರಂ ಸೇರಿದಂತೆ ಅಬ್ಬರದ ಬ್ಯಾಟಿಂಗ್ ಆಡಿಲ್ಲ. ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಚೆಂದದ ಬ್ಯಾಟಿಂಗ್ ಮೂಲಕ ಗೆಲುವಿಗೆ ಕಾರಣರಾಗಿದ್ದರು.
ಬೌಲಿಂಗ್‌ನಲ್ಲಿ ಓಟ್ನಿಲ್ ಬಾರ್ಥ್‌ಮ್ಯಾನ್, ಎನ್ರಿಚ್ ನಾಕಿಯಾ ಹಾಗೂ ಮಾರ್ಕೊ ಯಾನ್ಸೆನ್ ಅವರು ಉತ್ತಮ ಲಯದಲ್ಲಿದ್ಧಾರೆ.
ನಜ್ಮುಲ್ ಹುಸೇನ್ ಶಾಂತೋ ನಾಯಕತ್ವದ ಬಾಂಗ್ಲಾದೇಶವು ಇದುವರೆಗೆ ಆಡಿರುವ ಒಂದು ಪಂದ್ಯದಲ್ಲಿ ಶ್ರೀಲಂಕಾ ಎದುರು ಜಯಿಸಿದೆ. ಇದರಿಂದಾಗಿ ಅಪಾರ ಆತ್ಮವಿಶ್ವಾಸದಲ್ಲಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ದಿಟ್ಟ ಸವಾಲು ಎಸೆಯಲು ಸಿದ್ಧವಾಗಿದೆ.
ಬ್ಯಾಟರ್ ಲಿಟನ್ ದಾಸ್, ತೌಹಿದ್ ಹೃದಯ್, ಬೌಲರ್ ಮುಸ್ತಫಿಜುರ್ ರೆಹಮಾನ್ ಹಾಗೂ ರಶೀದ್ ಹುಸೇನ್ ಅವರು ಉತ್ತಮ ಲಯದಲ್ಲಿದ್ದಾರೆ. ಅವರ ಮೇಲೆ ತಂಡದ ನಿರೀಕ್ಷೆಯ ಭಾರವಿದೆ.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.