ADVERTISEMENT

South Africa VS Sri Lanka| ದಕ್ಷಿಣ ಆಫ್ರಿಕಾಗೆ ಸರಣಿ ಕಿರೀಟ

ಪಿಟಿಐ
Published 5 ಜನವರಿ 2021, 15:19 IST
Last Updated 5 ಜನವರಿ 2021, 15:19 IST
ಪಂದ್ಯ ಶ್ರೇಷ್ಠ ಟ್ರೋಫಿಯೊಂದಿಗೆ ಡೀನ್ ಎಲ್ಗರ್  –ಎಪಿ/ಪಿಟಿಐ ಚಿತ್ರ
ಪಂದ್ಯ ಶ್ರೇಷ್ಠ ಟ್ರೋಫಿಯೊಂದಿಗೆ ಡೀನ್ ಎಲ್ಗರ್  –ಎಪಿ/ಪಿಟಿಐ ಚಿತ್ರ   

ಜೋಹಾನ್ಸ್‌ಬರ್ಗ್: ಕ್ವಿಂಟನ್ ಡಿ ಕಾಕ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಮಂಗಳವಾರ ಶ್ರೀಲಂಕಾ ಎದುರಿನ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಗೆದ್ದು, 2–0ಯಿಂದ ಸರಣಿ ಜಯಿಸಿತು.

ಶ್ರೀಲಂಕಾ ತಂಡವು ಕೊಟ್ಟಿದ್ದ 66 ರನ್‌ಗಳ ಸುಲಭದ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡವು ನಿರಾಯಾಸವಾಗಿ ಮುಟ್ಟಿತು. ಲಂಕಾ ತಂಡದ ದಿಮುತ ಕರುಣಾರತ್ನ (103; 128ಎ) ಅವರ ಶತಕದ ಆಟವು ವ್ಯರ್ಥವಾಯಿತು. ಆತಿಥೇಯ ಬಳಗದ ವೇಗಿ ಲುಂಗಿ ಗಿಡಿ ಮತ್ತು ಎನ್ರಿಚ್ ನಾಕಿಯಾ ಅವರು ಮೇಲುಗೈ ಸಾಧಿಸಿದರು.

ಸಂಕ್ಷಿಪ್ತ ಸ್ಕೋರು

ADVERTISEMENT

ಮೊದಲ ಇನಿಂಗ್ಸ್: 40.3 ಓವರ್‌ಗಳಲ್ಲಿ 157, ದಕ್ಷಿಣ ಆಫ್ರಿಕಾ: 75.4 ಓವರ್‌ಗಳಲ್ಲಿ 302 (ಡೀನ್ ಎಲ್ಗರ್ 127, ವ್ಯಾನ್ ಡರ್ ಡಸೆ 67, ವಿಶ್ವ ಫರ್ನಾಂಡೊ 101ಕ್ಕೆ5) ಎರಡನೇ ಇನಿಂಗ್ಸ್: ಶ್ರೀಲಂಕಾ: 56.5 ಓವರ್‌ಗಳಲ್ಲಿ 211 (ದಿಮುತ ಕರುಣಾರತ್ನೆ 103, ತಿರಿಮಾನೆ 31, ಡಿಕ್ವೆಲಾ 36, ಲುಂಗಿ ಗಿಡಿ 44ಕ್ಕೆ4, ಎನ್ರಿಚ್ ನಾಕಿಯಾ 64ಕ್ಕೆ2, ಸಿಪಾಮ್ಲಾ 40ಕ್ಕೆ3), ದಕ್ಷಿಣ ಆಫ್ರಿಕಾ:13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 67 (ಏಡನ್ ಮರ್ಕರಂ ಔಟಾಗದೆ 36, ಡೀನ್ ಎಲ್ಗರ್ ಔಟಾಗದೆ 31) ಫಲಿತಾಂಶ:ದಕ್ಷಿಣ ಆಫ್ರಿಕಾ ತಂಡಕ್ಕೆ 10 ವಿಕೆಟ್‌ಗಳ ಜಯ. 2–0ಯಿಂದ ಸರಣಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.