ADVERTISEMENT

ನಿವೃತ್ತಿ ಸುದ್ದಿ ಸುಳ್ಳು: ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡು ಪ್ಲೆಸಿ

ಏಜೆನ್ಸೀಸ್
Published 21 ಜನವರಿ 2020, 10:26 IST
Last Updated 21 ಜನವರಿ 2020, 10:26 IST
ಫಾಫ್‌ ಡು ಪ್ಲೆಸಿ
ಫಾಫ್‌ ಡು ಪ್ಲೆಸಿ   

ಪೋರ್ಟ್‌ ಎಲಿಜಬೆತ್‌ : ‘ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸೋಮವಾರ ವಿದಾಯ ಪ್ರಕಟಿಸುತ್ತೇನೆ ಎಂದು ಹರಡಿರುವ ಸುದ್ದಿ ಅಕ್ಷರಶಃ ಸುಳ್ಳು. ಸದ್ಯದ ಮಟ್ಟಿಗೆ ಅಂತಹ ಯಾವ ಆಲೋಚನೆಯೂ ನನ್ನಲ್ಲಿ ಮೂಡಿಲ್ಲ’ ಎಂದು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡು ಪ್ಲೆಸಿ ತಿಳಿಸಿದ್ದಾರೆ.

ಸೋಮವಾರ ಮುಕ್ತಾಯವಾದ ಇಂಗ್ಲೆಂಡ್‌ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇನಿಂಗ್ಸ್‌ ಮತ್ತು 53ರನ್‌ಗಳಿಂದ ಪರಾಭವಗೊಂಡಿತ್ತು. ಈ ಪಂದ್ಯದ ಬಳಿಕ ಪ್ಲೆಸಿ ನಿವೃತ್ತಿ ಪ್ರಕಟಿಸುತ್ತಾರೆ ಎಂದು ಹೇಳಲಾಗಿತ್ತು.

‘ಈ ವರ್ಷದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿ ನಡೆಯಲಿದೆ. ಅಲ್ಲಿಯವರೆಗೂ ಕ್ರಿಕೆಟ್‌ ಆಡಬೇಕೆಂದು ನಿರ್ಧರಿಸಿದ್ದೇನೆ’ ಎಂದಿದ್ದಾರೆ.

ADVERTISEMENT

‘ವಿಶ್ವದ ಬಲಿಷ್ಠ ತಂಡಗಳ ಸಾಲಿನಲ್ಲಿದ್ದ ನಾವು ಈಗ ಸತತ ಸೋಲುಗಳಿಂದ ಜರ್ಜರಿತವಾಗಿದ್ದೇವೆ. ಎಲ್ಲವೂ ನಮ್ಮ ವಿರುದ್ಧವಾಗಿಯೇ ನಡೆಯುತ್ತಿದೆ. ಸೋಲು ಗೆಲುವಿನ ಹೊಣೆಯನ್ನು ನಾಯಕನೇ ಹೊರಬೇಕಾಗುತ್ತದೆ. ನಾನು ಪಲಾಯನವಾದಿಯಲ್ಲ. ಎಲ್ಲವನ್ನೂ ಸಮರ್ಥವಾಗಿ ಎದುರಿಸುತ್ತೇನೆ. ಸತತ ಸೋಲುಗಳಿಂದಾಗಿ ಸಹಜವಾಗಿಯೇ ಒತ್ತಡಕ್ಕೊಳಗಾಗಿದ್ದೇನೆ. ಇದನ್ನು ಮೀರಿ ನಿಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.