ಸಾಂದರ್ಭಿಕ ಚಿತ್ರ
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ): ಸ್ಪಿನ್ನರ್‌ಗಳಾದ ಮಿನ್ನು ಮಣಿ ಮತ್ತು ಪ್ರಿಯಾ ಮಿಶ್ರಾ ಕ್ರಮವಾಗಿ ಐದು ಮತ್ತು ನಾಲ್ಕು ವಿಕೆಟ್‌ಗಳನ್ನು ಪಡೆದು, ಏಕೈಕ ‘ಅನಧಿಕೃತ’ ಟೆಸ್ಟ್ ಪಂದ್ಯದ ಮೊದಲ ದಿನವಾದ ಗುರುವಾರ ಆಸ್ಟ್ರೇಲಿಯಾ ‘ಎ’ ತಂಡವನ್ನು 212 ರನ್‌ಗಳಿಗೆ ಉರುಳಿಸಿದರು.
ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದ ಕೊನೆಗೆ ಭಾರತ 2 ವಿಕೆಟ್‌ಗೆ 100 ರನ್ ಗಳಿಸಿದ್ದು ಉತ್ತಮ ಆರಂಭ ಮಾಡಿದೆ. ತಂಡ 112 ರನ್‌ಗಳಿಂದ ಹಿಂದಿದೆ.
ನಾಯಕಿ ಮತ್ತು ಆಫ್ ಸ್ಪಿನ್ನರ್ ಮಿನ್ನು 58ಕ್ಕೆ 5 ವಿಕೆಟ್ ಪಡೆದರೆ, ನೀಳಕಾಯದ ಲೆಗ್ ಸ್ಪಿನ್ನರ್ ಪ್ರಿಯಾ 58 ರನ್ನಿಗೆ 4 ವಿಕೆಟ್ ಕಬಳಿಸಿದರು.
ಆತಿಥೇಯ ತಂಡದ ಆರಂಭ ಆಟಗಾರ್ತಿ ಜಾರ್ಜಿಯಾ ವೊಲ್ (71, 95 ಎ, 4x12) ಸೊಗಸಾದ ಆಟವಾಡಿದರು. ಅವರು ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್ ಅವರಿಗೆ ವಿಕೆಟ್ ನೀಡಿದರು. ಕೊನೆಯಲ್ಲಿ ಮೈತ್ಲಾನ್ ಬ್ರೌನ್ (30, 49ಎ, 4x2) ಮತ್ತು ಗ್ರೇಸ್ ಪಾರ್ಸನ್ಸ್ (35, 55ಎ, 4x3) ಪ್ರತಿರೋಧ ತೋರಿದ್ದರಿಂದ ತಂಡ 200ರ ಗಡಿ ದಾಟಿತು.
ಭಾರತ ತಂಡ, ಪ್ರಿಯಾ ಪುನಿಯಾ (7) ಅವರನ್ನು ಬೇಗ ಕಳೆದುಕೊಂಡಿತು. ಶುಭಾ ಸತೀಶ್ (22) ಕೂಡ ಬೇರೂರಿ ಆಡಲಿಲ್ಲ. ಆರಂಭ ಆಟಗಾರ್ತಿ ಶ್ವೇತಾ ಸೆಹ್ರಾವತ್ (ಔಟಾಗದೇ 40, 109ಎ, 4x3) ಮತ್ತು ತೇಜಲ್ ಹಸಬನಿಸ್ (ಔಟಾಗದೇ 31, 64ಎ, 2x4) ಮುರಿಯದ ಮೂರನೇ ವಿಕೆಟ್‌ಗೆ 53 ರನ್ ಸೇರಿಸಿದ್ದಾರೆ.
ಸ್ಕೋರುಗಳು: ಆಸ್ಟ್ರೇಲಿಯಾ ‘ಎ’: 65.5 ಓವರುಗಳಲ್ಲಿ 212 (ಜಾರ್ಜಿಯಾ ವೊಲ್ 71; ಮಿನ್ನು ಮಣಿ 58ಕ್ಕೆ5, ಪ್ರಿಯಾ ಮಿಶ್ರಾ 58ಕ್ಕೆ4); ಭಾರತ ‘ಎ’: 36 ಓವರುಗಳಲ್ಲಿ 2 ವಿಕೆಟ್‌ಗೆ 100 (ಶ್ವೇತಾ ಸೆಹ್ರಾವತ್ ಬ್ಯಾಟಿಂಗ್ 40, ತೇಜಲ್ ಹಸಬನಿಸ್ ಬ್ಯಾಟಿಂಗ್ 31)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.