
ಪ್ರಜಾವಾಣಿ ವಾರ್ತೆ
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಅವರ ಹಿರಿಯ ಸಹೋದರ, ಮಾಜಿ ಕ್ರಿಕೆಟಿಗ ದಮ್ಮಿಕಾ ರಣತುಂಗ ಅವರನ್ನು ಶ್ರೀಲಂಕಾದ ಭ್ರಷ್ಟಾಚಾರ ನಿಗ್ರಹ ಆಯೋಗವು ಸೋಮವಾರ ಬಂಧಿಸಿದೆ. ಬಳಿಕ, ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ.
63 ವರ್ಷ ವಯಸ್ಸಿನ ದಮ್ಮಿಕಾ ಅವರು ಸರ್ಕಾರಿ ಒಡೆತನದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್‌ನ (ಸಿಪಿಸಿ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ (2017), ಕಚ್ಚಾ ತೈಲ ಖರೀದಿಯ ಟೆಂಡರ್‌ನಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. 1996ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ ಅವರು ಆ ಅವಧಿಯಲ್ಲಿ ಶ್ರೀಲಂಕಾದ ಪೆಟ್ರೋಲಿಯಂ ಖಾತೆ ಸಚಿವರಾಗಿದ್ದರು.
ಟೆಂಡರ್ ಅಕ್ರಮದಿಂದಾಗಿ ಸಿಪಿಸಿಗೆ 80 ಕೋಟಿ ಶ್ರೀಲಂಕಾ ರೂಪಾಯಿ ನಷ್ಟವಾಗಿದೆ ಎಂದು ಆಯೋಗವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.