ADVERTISEMENT

ಕೋವಿಡ್: ಭಾರತ ವಿರುದ್ದ ಸರಣಿಗೆ ಲಂಕಾದ ಹೊಸ ತಂಡ?

ಪಿಟಿಐ
Published 9 ಜುಲೈ 2021, 15:58 IST
Last Updated 9 ಜುಲೈ 2021, 15:58 IST
ಶ್ರೀಲಂಕಾ ತಂಡದ ಆಟಗಾರರ ಸಂಗ್ರಹ ಚಿತ್ರ (ಪಿಟಿಐ)
ಶ್ರೀಲಂಕಾ ತಂಡದ ಆಟಗಾರರ ಸಂಗ್ರಹ ಚಿತ್ರ (ಪಿಟಿಐ)   

ಕೊಲಂಬೊ: ಕೋವಿಡ್ ಸಾಂಕ್ರಾಮಿಕ ರೋಗದ ಭೀತಿ ಹಿನ್ನೆಲೆಯಲ್ಲಿ ಭಾರತದ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಆಟಗಾರರ ಎರಡು ಗುಂಪುಗಳನ್ನು ಬಯೋ ಬಬಲ್‌ನಲ್ಲಿ ಇರಿಸಿದೆ.

ಆಟಗಾರರ ಒಂದು ಗುಂಪನ್ನು ಕೊಲಂಬೊದಲ್ಲಿ ಹಾಗೂ ಇನ್ನೊಂದು ಗುಂಪನ್ನು ಡಂಬುಲಾದಲ್ಲಿ ಇರಿಸಲಾಗಿದೆ.

‘ಇಎಸ್‌ಪಿಎನ್‌ ಕ್ರಿಕ್‌ಇನ್ಫೊ’ ಮಾಹಿತಿ ಪ್ರಕಾರ, ಈ ಎರಡು ಗುಂಪುಗಳ ಆಟಗಾರರು ಜುಲೈ 13ರಿಂದ ಭಾರತದ ವಿರುದ್ಧ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಶ್ರೀಲಂಕಾ ತಂಡದ ಡೇಟಾ ಅನಾಲಿಸ್ಟ್‌ ಜಿ.ಟಿ. ನಿರೋಶನ್‌ಗೆ ಕೋವಿಡ್ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಇದಕ್ಕೂ ಮುನ್ನ ತಂಡದ ಬ್ಯಾಟಿಂಗ್‌ ಕೋಚ್ ಗ್ರ್ಯಾಂಟ್‌ ಫ್ಲವರ್ ಅವರಿಗೆ ಕೋವಿಡ್ ದೃಢಪಟ್ಟಿತ್ತು.

ವರದಿಯೊಂದರ ಪ್ರಕಾರ, ಈ ಇಬ್ಬರೂ ಸಿಬ್ಬಂದಿಯಲ್ಲಿ ಕೊರೊನಾ ವೈರಸ್‌ನ ‘ಡೆಲ್ಟಾ ರೂಪಾಂತರ’ ಪತ್ತೆಯಾಗಿದೆ ಎನ್ನಲಾಗಿದೆ. ತಂಡದ ಇತರ ಎಲ್ಲ ಆಟಗಾರರು ಕ್ವಾರಂಟೈನ್‌ನಲ್ಲಿ ಇದ್ದು ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.