
ಕೊಲಂಬೊ: ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಎಂಟು ಮಂದಿ ಆಟಗಾರರು ಗುರುವಾರ ತವರಿಗೆ ಮರಳಲು ಸಜ್ಜಾಗಿದ್ದಾರೆ. ಇಸ್ಲಾಮಾಬಾದಿನಲ್ಲಿ ಭೀಕರ ಬಾಂಬ್ ಸ್ಪೋಟದ ನಂತರ ಆಟಗಾರರು ಸುರಕ್ಷತೆಯ ಬಗ್ಗೆ ಕಳವಳಗೊಂಡಿದ್ದಾರೆ.
ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದರು.
ಆಟಗಾರರ ಮರಳುವ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ ಮೂಲವೊಂದು ಖಚಿತಪಡಿಸಿದೆ. ಹೀಗಾಗಿ ಗುರುವಾರ ರಾವಲ್ಪಿಂಡಿಯಲ್ಲಿ ನಿಗದಿಯಾಗಿರುವ ಪಂದ್ಯ ರದ್ದಾಗುವುದು ಖಚಿತವಾಗಿದೆ. ಇದೇ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯವನ್ನು ಪಾಕ್ ಗೆದ್ದುಕೊಂಡಿತ್ತು.
ತವರಿಗೆ ಮರಳುತ್ತಿರುವ ಎಂಟು ಆಟಗಾರರ ಬದಲಿಗೆ ಬೇರೆಯವರನ್ನು ಕಳುಹಿಸಲಾಗುವುದು ಎಂದೂ ಅದು ತಿಳಿಸಿದೆ.
2009ರಲ್ಲಿ ಲಾಹೋರ್‌ನ ಗಡಾಫಿ ಕ್ರೀಡಾಂಗಣದತ್ತ ಪ್ರಯಾಣಿಸುತ್ತಿದ್ದ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಬಂದೂಕುದಾರಿ ಉಗ್ರರು ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.