ADVERTISEMENT

ಯುರೊ ಸ್ಲಾಮ್‌ ಟ್ವೆಂಟಿ–20 ಲೀಗ್‌ನಲ್ಲಿ ಸ್ಟೇಯ್ನ್‌ ಆಟ

ಪಿಟಿಐ
Published 2 ಜುಲೈ 2019, 19:30 IST
Last Updated 2 ಜುಲೈ 2019, 19:30 IST
ಡೇಲ್‌ ಸ್ಟೇಯ್ನ್‌
ಡೇಲ್‌ ಸ್ಟೇಯ್ನ್‌   

ನವದೆಹಲಿ: ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇಯ್ನ್‌, ಯುರೊ ಸ್ಲಾಮ್‌ ಟ್ವೆಂಟಿ–20 ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಚೊಚ್ಚಲ ಆವೃತ್ತಿಯ ಟೂರ್ನಿಯು ನೆದರ್ಲೆಂಡ್ಸ್‌ನಲ್ಲಿ ಆಗಸ್ಟ್‌ 30ರಿಂದ ನಡೆಯಲಿದೆ.

36 ವರ್ಷದ ಸ್ಟೇಯ್ನ್‌, ಈ ಸಲದ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಗಳಿಸಿದ್ದರು. ಗಾಯದ ಕಾರಣ ಟೂರ್ನಿಗೆ ಅಲಭ್ಯರಾಗಿದ್ದರು.

ADVERTISEMENT

‘ಸ್ಟೇಯ್ನ್‌ ಅವರು ಲೀಗ್‌ನಲ್ಲಿ ಆಡಲು ಒಪ್ಪಿದ್ದಾರೆ. ಇಮ್ರಾನ್‌ ತಾಹೀರ್‌, ಜೆ.ಪಿ.ಡುಮಿನಿ, ಕ್ರಿಸ್‌ ಲಿನ್‌, ಬಾಬರ್‌ ಆಜಂ, ಲೂಕ್‌ ರೊಂಚಿ ಅವರ ಜೊತೆಗೆ ಎಯಾನ್‌ ಮಾರ್ಗನ್‌, ಶಾಹಿದ್‌ ಅಫ್ರಿದಿ, ಬ್ರೆಂಡನ್‌ ಮೆಕ್ಲಮ್‌, ಶೇನ್‌ ವಾಟ್ಸನ್‌ ಮತ್ತು ರಶೀದ್‌ ಖಾನ್‌ ಅವರೂ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ’ ಎಂದು ಕ್ರಿಕೆಟ್‌ ನೆದರ್ಲೆಂಡ್ಸ್‌ (ಸಿಎನ್‌) ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

‘ಯುರೊ ಸ್ಲಾಮ್‌ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗಿದೆ’ ಎಂದು ಸ್ಟೇಯ್ನ್‌ ತಿಳಿಸಿದ್ದಾರೆ.

ಆರು ಫ್ರಾಂಚೈಸ್‌ಗಳನ್ನು ಹೊಂದಿರುವ ಈ ಲೀಗ್‌ ಮೂರು ವಾರಗಳ ಸಮಯ ನಡೆಯಲಿದೆ.

ಸ್ಟೇಯ್ನ್‌ ಅವರು ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ (439) ಪಡೆದ ಬೌಲರ್‌ ಎಂಬ ಹಿರಿಮೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.