ಲಂಡನ್: ಇಂಗ್ಲಿಷ್ ಸಾಕರ್ ಕ್ಲಬ್ ಸ್ಟೋಕ್‌ನ ಮ್ಯಾನೇಜರ್ ಮೈಕೆಲ್ ಓ ನೀಲ್ ಅವರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
ಸೋಮವಾರ ಅವರ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಈ ಹಿಂದೆ ಐದು ಬಾರಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ಎಂದು ಬಂದಿತ್ತು ಎಂದು ಕ್ಲಬ್ ಸಹಾಯಕ ಮ್ಯಾನೇಜರ್ ಬಿಲ್ಲಿ ಮೆಕಿನ್ಲೆ ತಿಳಿಸಿದ್ದಾರೆ.
ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪ್ರತ್ಯೇಕವಾಸ ಮಾಡಬೇಕೆಂದು ಓ ನೀಲ್ ಅವರಿಗೆ ಸೂಚಿಸಲಾಗಿದೆ. ಅವರು ಗುಣಮುಖರಾಗುವವರೆಗೂ ಬಿಲ್ಲಿ ಮೆಕಿನ್ಲೆ ತರಬೇತಿಯ ಹೊಣೆ ನಿಭಾಯಿಸುವರು. ಇದೇ ತಿಂಗಳು ನಡೆಯಲಿರುವ ಟೂರ್ನಿಯಲ್ಲಿ ಸ್ಟೋಕ್ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.