ADVERTISEMENT

ಐಪಿಎಲ್‌ ಆಡಲು ಇಂದು ಯುಎಇಗೆ ಬೆನ್ ಸ್ಟೋಕ್ಸ್

ಪಿಟಿಐ
Published 3 ಅಕ್ಟೋಬರ್ 2020, 11:20 IST
Last Updated 3 ಅಕ್ಟೋಬರ್ 2020, 11:20 IST
ಬೆನ್ ಸ್ಟೋಕ್ಸ್–ಎಎಫ್‌ಪಿ ಚಿತ್ರ
ಬೆನ್ ಸ್ಟೋಕ್ಸ್–ಎಎಫ್‌ಪಿ ಚಿತ್ರ   

ದುಬೈ : ವಿಶ್ವದ ಪ್ರಮುಖ ಆಲ್‌ರೌಂಡರ್ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರು ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಲು ಭಾನುವಾರ ಯುಎಇಗೆ ತಲುಪಲಿದ್ದಾರೆ. ಆರು ದಿನಗಳ ಪ್ರತ್ಯೇಕವಾಸದಬಳಿಕ ಅವರು ತಮ್ಮ ತಂಡ ರಾಜಸ್ಥಾನ ರಾಯಲ್ಸ್ಅನ್ನು ಸೇರಿಕೊಳ್ಳಲಿದ್ದಾರೆ.

ಅನಾರೋಗ್ಯಪೀಡಿತರಾಗಿರುವ ತಂದೆಯ ಜೊತೆ ಇರುವುದಕ್ಕಾಗಿ ಸ್ಟೋಕ್ಸ್ ನ್ಯೂಜಿಲೆಂಡ್‌ಗೆ ತೆರಳಿದ್ದರು. ಹೀಗಾಗಿ ಮೊದಲ ಕೆಲವು ಪಂದ್ಯಗಳಲ್ಲಿ ಅವರು ಆಡಿಲ್ಲ.

ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ತಂದೆಯ ಜೊತೆ ಇರಲು ಸ್ಟೋಕ್ಸ್‌, ಪಾಕಿಸ್ತಾನ ವಿರುದ್ಧ ಆಗಸ್ಟ್‌ನಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯನ್ನು ತ್ಯಜಿಸಿ ಕ್ರೈಸ್ಟ್ಚಚರ್ಚ್‌ಗೆ ತೆರಳಿದ್ದರು.

ADVERTISEMENT

‘ಸ್ಟೋಕ್ಸ್ ಭಾನುವಾರ ಯುಎಇ ತಲುಪಲಿದ್ದಾರೆ. ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ ಬಳಿಕತಂಡದ ಶಿಬಿರವನ್ನು ಸೇರಲಿದ್ದಾರೆ‘ ಎಂದು ರಾಜಸ್ಥಾನ ರಾಯಲ್ಸ್ ತಂಡದ ಮೂಲಗಳು ತಿಳಿಸಿವೆ.

ಸ್ಟೋಕ್ಸ್ ಯುಎಇಗೆ ಬರುತ್ತಿರುವ ಚಿತ್ರವನ್ನೂ ಫ್ರ್ಯಾಂಚೈಸ್ ತನ್ನ‌ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.