ADVERTISEMENT

ಟೆಸ್ಟ್‌ನಲ್ಲಿ ಕನಿಷ್ಠ ಮೊತ್ತ: ಅಂದು ಲಾರ್ಡ್ಸ್‌, ಇಂದು ಅಡಿಲೇಡ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 19:44 IST
Last Updated 19 ಡಿಸೆಂಬರ್ 2020, 19:44 IST
ಅಜಿತ್ ವಾಡೇಕರ್
ಅಜಿತ್ ವಾಡೇಕರ್   

ಅಡಿಲೇಡ್: ನಲ್ವತ್ತಾರು ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ಎದುರು ಲಾರ್ಡ್ಸ್‌ನಲ್ಲಿ ಗಳಿಸಿದ್ದ 42 ರನ್‌ಗಳು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು. ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದ ತಂಡ ಅದಾಗಿತ್ತು.

ಆ ಪಂದ್ಯದಲ್ಲಿಯೂ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡವು ಕುಸಿದಿತ್ತು. ಇಂಗ್ಲೆಂಡ್ ತಂಡದ ವೇಗಿ ಕ್ರಿಸ್ ಓಲ್ಡ್ ಮತ್ತು ಜೆಫ್ ಅರ್ನಾಲ್ಡ್‌ ಕ್ರಮವಾಗಿ ಐದು ಮತ್ತು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಇನಿಂಗ್ಸ್‌ನಲ್ಲಿ ಸ್ಪಿನ್ನರ್ ಬಿ.ಎಸ್. ಚಂದ್ರಶೇಖರ್ ಅವರು ಕೊನೆಯ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಅವರು ಗಾಯಗೊಂಡು ನಿವೃತ್ತರಾಗಿದ್ದರು.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 629 ರನ್ ಗಳಿಸಿತ್ತು. ಡೆನಿಸ್ ಅಮಿಸ್, ಮೈಕ್ ಡೆನಿಸ್ ಮತ್ತು ಟೋನಿ ಗ್ರೇಗ್ ಅವರು ಶತಕ ಬಾರಿಸಿದ್ದರು. ಭಾರತದ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಆರು ವಿಕೆಟ್‌ಗಳನ್ನೂ ಕಬಳಿಸಿದ್ದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 302 ರನ್ ಗಳಿಸಿ ಆಲೌಟ್ ಆಗಿತ್ತು. ಸುನಿಲ್ ಗಾವಸ್ಕರ್ 49, ಫಾರೂಕ್ ಇಂಜಿನಿಯರ್ 86, ಜಿ.ಆರ್. ವಿಶ್ವನಾಥ್ 52 ಮತ್ತು ಏಕನಾಥ್ ಸೋಳ್ಕರ್ 43 ರನ್ ಗಳಿಸಿದ್ದರು. ಆದರೆ ಇಂಗ್ಲೆಂಡ್ ತಂಡವು ಭಾರತದ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್‌ನಲ್ಲಿ ಸೋಳ್ಕರ್ (18ರನ್) ಬಿಟ್ಟರೆ ಉಳಿದ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ.

ADVERTISEMENT

ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆ 42 ರನ್‌ಗಳೇ ಇಲ್ಲಿಯವರೆಗೂ ಅತ್ಯಂತ ಕಡಿಮೆ ಮೊತ್ತವಾಗಿತ್ತು. ಇದೀಗ ಎರಡನೇ ಸ್ಥಾನಕ್ಕೆ ಇಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.