ನವದೆಹಲಿ: ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇದೀಗ ನಟನಾ ವೃತ್ತಿಗೆ ಕಾಲಿಡಲು ಸಜ್ಜಾಗಿದ್ದಾರೆ. ತಮಿಳು ಚಿತ್ರವೊಂದರಲ್ಲಿ ಅವರು ನಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ಬ್ಯಾನರ್, ‘ಡ್ರೀಮ್ ನೈಟ್ ಸ್ಟೋರೀಸ್’ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ. ಈ ಪೋಸ್ಟ್ ಅನ್ನು ರೈನಾ ತಮ್ಮ ಎಕ್ಸ್ ಖಾತೆಯಲ್ಲಿ ರೀಶೇರ್ ಮಾಡಿದ್ದಾರೆ.
ಕ್ರಿಕೆಟ್ ಮೈದಾನದಿಂದ ಕಾಲಿವುಡ್ ಫ್ರೇಮ್ಸ್‌ಗೆ ಚೆನ್ನೈ ಸ್ಫೂರ್ತಿಯನ್ನು ನನ್ನೊಂದಿಗೆ ತರುತ್ತಿದ್ದೇನೆ. ಈ ಹೊಸ ಪಯಣ ಆರಂಭಿಸಲು ಹೆಮ್ಮೆಯಾಗುತ್ತಿದೆ ಎಂದೂ ಬರೆದುಕೊಂಡಿದ್ದಾರೆ.
‘ಚಿನ್ನ ತಲಾ’ಸುರೇಶ್ ರೈನಾ ಅವರಿಗೆ #DKSProductionNo1ಗೆ ಸ್ವಾಗತ’ಎಂದು ನಿರ್ಮಾಣ ಸಂಸ್ಥೆ ಬರೆದುಕೊಂಡಿದೆ. ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದ ರೈನಾ ಅವರನ್ನು ತಮಿಳು ಕ್ರಿಕೆಟ್ ಅಭಿಮಾನಿಗಳು ‘ಚಿನ್ನ ತಲಾ’ಎಂದು ಅಭಿಮಾನದಿಂದ ಕರೆಯುತ್ತಾರ.
ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ರೈನಾ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿರುವುದನ್ನು ವಿಡಿಯೊವನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.
ಡಿ. ಶರವಣ ಕುಮಾರ್ ಪ್ರಸ್ತುತಪಡಿಸುತ್ತಿರುವ ಹೆಸರಿಡದ ಈ ಚಿತ್ರವನ್ನು ಲೋಗನ್ ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಲಿದ್ದಾರೆ.
38 ವರ್ಷದ ರೈನಾ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಬ್ಯಾಟರ್.
2011ರ ಕ್ರಿಕೆಟ್ ವಿಶ್ವಕಪ್ ಮತ್ತು 2011ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿದ್ದ ರೈನಾ, ಉತ್ತಮ ಪ್ರದರ್ಶನ ನೀಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.