ADVERTISEMENT

ಐಸಿಸಿ ವರ್ಷದ ಟಿ–20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್

ಪಿಟಿಐ
Published 22 ಜನವರಿ 2024, 13:56 IST
Last Updated 22 ಜನವರಿ 2024, 13:56 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

(ರಾಯಿಟರ್ಸ್ ಚಿತ್ರ)

ದುಬೈ: ಭಾರತ ತಂಡದ ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರನ್ನು ಐಸಿಸಿ ವರ್ಷದ ಟಿ20 ತಂಡದ ನಾಯಕರಾಗಿ ಹೆಸರಿಸಲಾಗಿದೆ.

ADVERTISEMENT

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸತತ ಎರಡನೇ ಬಾರಿಗೆ ಸೂರ್ಯಕುಮಾರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟಿ20 ವರ್ಷದ ಕ್ರಿಕೆಟಿಗ ರೇಸ್‌ನಲ್ಲೂ ಅವರು ಇದ್ದಾರೆ.

2023ರಲ್ಲಿ ಅವರು ಉತ್ತಮ ರನ್ ಗಳಿಕೆ ಮೂಲಕ ಹೆಸರು ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ವರ್ಷದ ಮೊದಲ ಪಂದ್ಯದಲ್ಲಿ ಕೇವಲ 7 ರನ್ ಸಿಡಿಸಿದ್ದ ಸೂರ್ಯ, ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 51(36) ಮತ್ತು 112(51) ರನ್ ಸಿಡಿಸಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 20 ಮತ್ತು 40 ಆಸುಪಾಸಿನಲ್ಲಿ ಔಟಾಗಿದ್ದ ಅವರು 44 ಎಸೆತಗಳಲ್ಲಿ 83 ರನ್ ಸಿಡಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು.

ಕಳೆದ ವರ್ಷದಲ್ಲಿ ರೋಹಿತ್ ಶರ್ಮಾ ಗಾಯಗೊಂಡಾಗ ಸೂರ್ಯ, ಟಿ20 ತಂಡವನ್ನು ಮುನ್ನಡೆಸಿದ್ದಾರೆ.

11 ಸದಸ್ಯರ ಐಸಿಸಿ ವರ್ಷದ ತಂಡದಲ್ಲಿ ಇಂಗ್ಲೆಂಡ್‌ ಫಿಲ್ ಸಾಲ್ಟ್ ಮತ್ತು ಭಾರತದ ಯಶಸ್ವಿ ಜೈಸ್ವಾಲ್ ಆರಂಭಿಕ ಜೋಡಿಯಾಗಿದ್ದಾರೆ. ವೆಸ್ಟ್‌ಇಂಡೀಸ್‌ನ ನಿಕೋಲಸ್ ಪೂರನ್ ವಿಕೆಟ್ ಕೀಪರ್ ಆಗಿದ್ದರೆ, ನ್ಯೂಜಿಲೆಂಡ್‌ನ ಮಾರ್ಕ್‌ ಚಾಪ್‌ಮನ್, ಜಿಂಬಾಬ್ವೆಯ ಸಿಕಂದರ್ ರಾಜಾ, ರಿಚರ್ಡ್ ಗರಾವಾ, ಉಗಾಂಡಾ ಆಲ್‌ರೌಂಡರ್ ಅಲ್ಪೇಶ್ ರಾಮಜಾನಿ, ಐರ್ಲೆಂಡ್‌ನ ಮಾರ್ಕ್ ಅಡೈರ್ ತಂಡದಲ್ಲಿ ಸ್ಥಾನ ಪಡೆದ ಇತರೆ ಆಟಗಾರರಾಗಿದ್ದಾರೆ.

ಮಹಿಳಾ ತಂಡದಲ್ಲಿ ಭಾರತದಿಂದ ಸ್ಪಿನ್ನರ್ ದೀಪ್ತಿ ಶರ್ಮಾ ಮಾತ್ರ ಸ್ಥಾನಕ್ಕೆ ಪಡೆದಿದ್ಧಾರೆ. ಶ್ರೀಲಂಕಾ ಚಾಮರಿ ಅಟಪಟ್ಟು ಮಹಿಳಾ ತಂಡದ ನಾಯಕಿಯಾಗಿದ್ದಾರೆ.

ಮಹಿಳಾ ತಂಡದಲ್ಲಿ ಬೆತ್ ಮೂನಿ(ವಿಕೆಟ್ ಕೀಪರ್), ಎಲ್ಲೀಸ್ ಪೆರಿ, ಆ್ಯಶ್ ಗಾರ್ಡನರ್ ಮತ್ತು ಮೆಘನ್ ಸ್ಕಟ್ ಸೇರಿ 4 ಮಂದಿ ಆಸ್ಟ್ರೇಲಿಯಾ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನಿಂದ ನ್ಯಾಟ್ ಸ್ಕೈವರ್ ಬ್ರಂಟ್ ಮತ್ತು ಸೋಫಿಯಾ ಎಕ್ಲೆಸ್ಟೋನ್, ದಕ್ಷಿಣ ಆಫ್ರಿಕಾದಿಂದ ಲೌರಾ ವೊಲ್ವಾರ್ಡ್, ವೆಸ್ಟ್ ಇಂಡೀಸ್‌ನಿಂದ ಹ್ಯಾಯ್ಲೇ ಮ್ಯಾಥ್ಯೂಸ್ ಹಾಗೂ ನ್ಯೂಜಿಲೆಂಡ್‌ನಿಂದ ಅಮೆಲಿಯಾ ಕೆರ್ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.