ADVERTISEMENT

ಫೀಲ್ಡಿಂಗ್ ಕೋಚ್‌: ದಿಲೀಪ್‌ ಮರುನೇಮಕ

ಪಿಟಿಐ
Published 27 ಮೇ 2025, 22:47 IST
Last Updated 27 ಮೇ 2025, 22:47 IST
ಟಿ.ದಿಲೀಪ್‌ (ಮಧ್ಯದಲ್ಲಿರುವವರು)
ಟಿ.ದಿಲೀಪ್‌ (ಮಧ್ಯದಲ್ಲಿರುವವರು)   

ನವದೆಹಲಿ: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಟಿ.ದಿಲೀಪ್ ಅವರನ್ನು ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಮರು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ.

2024-25ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ಕಳಪೆ ಪ್ರದರ್ಶನದ ನಂತರ ನೆರವು ಸಿಬ್ಬಂದಿಯ ಬದಲಾವಣೆ ಸಂದರ್ಭದಲ್ಲಿ ದಿಲೀಪ್ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಕೈಬಿಡಲಾಗಿತ್ತು.

‘ದಿಲೀಪ್ ಅವರು ಉತ್ತಮ ತರಬೇತುದಾರ. ಅವರು ಮೂರು ವರ್ಷಗಳಿಗೂ ಹೆಚ್ಚು ಕಾಲ (2021ರಿಂದ) ತಂಡಕ್ಕೆ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ತಂಡದಲ್ಲಿರುವ ಕ್ರಿಕೆಟಿಗರನ್ನು ಅವರು ಬಹಳ ಹತ್ತಿರದಿಂದ ತಿಳಿದಿದ್ದಾರೆ. ಆದ್ದರಿಂದ, ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ADVERTISEMENT

ಹೊಸ ಫೀಲ್ಡಿಂಗ್ ಕೋಚ್ ಆಗಿ ವಿದೇಶಿ ಮಾಜಿ ಕ್ರಿಕೆಟಿಗರನ್ನು ನೇಮಿಸಿಕೊಳ್ಳಲು ಬಿಸಿಸಿಐ ತುಂಬಾ ಉತ್ಸುಕವಾಗಿತ್ತು. ಆದರೆ ಆಡಳಿತ ಮಂಡಳಿಗೆ ಅಗತ್ಯ ಸಮಯದಲ್ಲಿ ಅದು ಸಾಧ್ಯವಾಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.