ADVERTISEMENT

ಚರ್ಚೆ | T20 ವಿಶ್ವಕಪ್‌: ಟೀಂ ಇಂಡಿಯಾಗೆ ಸವಾಲು ಒಡ್ಡುವುದೇ ನಮಿಬಿಯಾ ?

ಪ್ರಜಾವಾಣಿ ವಿಶೇಷ
Published 12 ಫೆಬ್ರುವರಿ 2026, 9:14 IST
Last Updated 12 ಫೆಬ್ರುವರಿ 2026, 9:14 IST

ಟಿ20 ಕ್ರಿಕೆಟ್ ಎಂದರೆ ‘ಚುಟುಕು ಮಾದರಿ’ ಎಂಬ ಹೆಸರಿದೆ. ಆದರೆ ಈ ಮಾದರಿಯಲ್ಲಿ ಯಾವುದೇ ತಂಡವೂ ಚಿಕ್ಕದಲ್ಲ. ಅನನುಭವಿ ಎಂದುಕೊಳ್ಳುವ ತಂಡವು ಅಚ್ಚರಿಯ ಗೆಲುವು ಸಾಧಿಸಿ ಘಟಾನುಘಟಿ ತಂಡಗಳಿಗೆ ಸೋಲುಣಿಸಿದ ಉದಾಹರಣೆಗಳಿವೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿಯೂ ಅಂತಹ ಫಲಿತಾಂಶಗಳು ಬಂದರೆ ಅಚ್ಚರಿಯಿಲ್ಲ. ಆದ್ದರಿಂದ ಭಾರತ ತಂಡವು ತನ್ನ ಎರಡನೇ ಪಂದ್ಯದಲ್ಲಿ ಎದುರಾಳಿ ನಮಿಬಿಯಾ ತಂಡವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಮೊದಲ ಪಂದ್ಯದಲ್ಲಿ ಅಮೆರಿಕ ನೀಡಿದ ಕಠಿಣ ಸವಾಲನ್ನೂ ಮರೆಯುವಂತಿಲ್ಲ. ಅಂಬೆಗಾಲಿಕ್ಕುವ ಮಗು ಎಂಬಂತೆ ಕಾಣುವ ತಂಡಗಳು ಇದುವರೆಗೆ ತೋರಿರುವ ಆಟವು ಅಸಾಧಾರಣ. ಇಂತಹ ಸಂಗತಿಗಳಿಂದಲೇ ಚುಟುಕು ಕ್ರಿಕೆಟ್ ರೋಚಕವಾಗುತ್ತದೆ. ಈ ಕುರಿತ ವಿಶ್ಲೇಷಣೆ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.