ADVERTISEMENT

ಟಿ20 ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:32 IST
Last Updated 9 ಜನವರಿ 2023, 19:32 IST

ಬೆಂಗಳೂರು: ನಾಯಕಿ ವರ್ಷಾ ಯು. (118 ರನ್, 53 ಎಸೆತ) ಅವರ ಶತಕ ಮತ್ತು ಗಂಗಾ (8ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡವು ಅಂಧ ಮಹಿಳೆಯರ ಇಂಡಸ್ ಇಂಡ್ ಬ್ಯಾಂಕ್ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತು.

ಅಲ್ಟಾಯರ್ ಅಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ 174 ರನ್‌ಗಳಿಂದ ಗೆದ್ದಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹಾಲಿ ಚಾಂಪಿಯನ್ ಕರ್ನಾಟಕ 18 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪಶ್ಚಿಮ ಬಂಗಾಳ ತಂಡವು ಕೇವಲ 64 ರನ್‌ ಗಳಿಸಿತು.

ADVERTISEMENT

ಒಡಿಶಾಗೆ ಸುಲಭ ಜಯ: ಸಚಿನ್ ತೆಂಡೂಲ್ಕರ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಒಡಿಶಾ 10 ವಿಕೆಟ್‌ ಗಳಿಂದ ಹರಿಯಾಣ ವಿರುದ್ಧ ಜಯ ಗಳಿಸಿತು. ಇನ್ನುಳಿದ ಪಂದ್ಯಗಳಲ್ಲಿ ರಾಜಸ್ಥಾನ 11 ರನ್‌ಗಳಿಂದ ಜಾರ್ಖಂಡ್‌ಗೆ, ದೆಹಲಿ 67 ರನ್‌ಗಳಿಂದ ಕೇರಳಕ್ಕೆ ಸೋಲುಣಿಸಿತು. ಆಂಧ್ರ 9 ವಿಕೆಟ್‌ಗಳಿಂದ ಮಹಾರಾಷ್ಟ್ರ ಎದುರು, ಚಂಡೀಗಢ 21 ರನ್‌ಗಳಿಂದ ತೆಲಂಗಾಣ ಎದುರು ಗೆದ್ದವು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 18 ಓವರ್‌ಗಳಲ್ಲಿ 3 ವಿಕೆಟ್‌ಗೆ 238 (ವರ್ಷಾ ಯು. 118, ಕಾವ್ಯ ಎನ್.ಆರ್. 46, ಗಂಗಾ 30; ಮೆಹೆಕ್ ಲಾಕ್ರಾ 40ಕ್ಕೆ 1). ಪಶ್ಚಿಮ ಬಂಗಾಳ: 18 ಓವರ್‌ಗಳಲ್ಲಿ 7 ವಿಕೆಟ್‌ಗೆ 64 (ನಾಸಿರಾ ಖತೂನ್ ಔಟಾಗದೆ 13, ಪ್ರತಿಮಾ ಘೋಷ್ 10; ಗಂಗಾ 8ಕ್ಕೆ 4, ದೀಪಿಕಾ 8ಕ್ಕೆ 2). ಫಲಿತಾಂಶ: ಕರ್ನಾಟಕಕ್ಕೆ 174 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.