
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಕರ್ನಾಟಕ ತಂಡವು ಬಿಸಿಸಿಐ 19 ವರ್ಷದೊಳಗಿನ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.
ಕೋಲ್ಕತ್ತದ ಆದಿತ್ಯ ಅಕಾಡೆಮಿ ಮೈದಾನದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು 48 ರನ್‌ಗಳಿಂದ ಬರೋಡಾ ತಂಡವನ್ನು ಮಣಿಸಿತು. ಇದೇ 12ರಂದು ಕೋಲ್ಕತ್ತದ ಸಾಲ್ಟ್ ಲೇಕ್ ಜೆಯು ಎರಡನೇ ಕ್ಯಾಂಪಸ್‌ನಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಆಂಧ್ರ ತಂಡವನ್ನು ಎದುರಿಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ಶ್ರೇಯಾ ಎಸ್. ಚವ್ಹಾಣ್ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 117 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬರೋಡಾ ತಂಡವು 19.2 ಓವರ್‌ಗಳಲ್ಲಿ 69 ರನ್‌ಗಳಿಗೆ ಕುಸಿಯಿತು. ದೀಕ್ಷಾ ಜೆ. ಮತ್ತು ವಂದಿತಾ ಕೆ.ರಾವ್ ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 117 (ಶ್ರೇಯಾ ಎಸ್. ಚವ್ಹಾಣ್ 58, ಕಾರ್ಣಿಕಾ ಕಾರ್ತಿಕ್ ಔಟಾಗದೇ 27; ರಿದ್ಧಿ ಸಿಂಗ್ 29ಕ್ಕೆ 2). ಬರೋಡಾ: 19.2 ಓವರ್‌ಗಳಲ್ಲಿ 69 (ದೀಕ್ಷಾ ಜೆ. 29ಕ್ಕೆ 2, ವಂದಿತಾ ಕೆ. ರಾವ್ 21ಕ್ಕೆ 2). ಫಲಿತಾಂಶ: ಕರ್ನಾಟಕ್ಕೆ 48 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.