ADVERTISEMENT

T20 WC: ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುವ ಪಂದ್ಯಗಳಿಗೆ ಉಗ್ರರ ದಾಳಿ ಬೆದರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮೇ 2024, 6:14 IST
Last Updated 6 ಮೇ 2024, 6:14 IST
<div class="paragraphs"><p>X/@T20WorldCup<br></p></div>
   

X/@T20WorldCup

ನವದೆಹಲಿ: ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸಹ ಆತಿಥ್ಯ ವಹಿಸಿರುವ ವೆಸ್ಟ್ ಇಂಡೀಸ್ ದೇಶಕ್ಕೆ ಉತ್ತರ ಪಾಕಿಸ್ತಾನದಿಂದ ಭಯೋತ್ಪಾದನಾ ದಾಳಿ ಬೆದರಿಕೆ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಭದ್ರತಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕರಿಗೆ ವಿಂಡೀಸ್ ತಿಳಿಸಿದೆ.

ADVERTISEMENT

ಜೂನ್ 1ರಿಂದ 29ರವರೆಗೆ ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಇದರ ಮೇಲೆ ಉಗ್ರರ ಕಣ್ಣು ಬಿದ್ದಿದ್ದು, ಐಎಸ್ ಖೋರಸನ್ ಉಗ್ರ ಸಂಘಟನೆಯು ದಾಳಿಗೆ ಸಂಚು ರೋಪಿಸಿರುವುದು ಬೆಳಕಿಗೆ ಬಂದಿದೆ.

ಟಿ20 ವಿಶ್ವಕಪ್‌ಗೆ ಉಗ್ರರ ದಾಳಿ ಬೆದರಿಕೆ ಇರುವುದನ್ನು ಟ್ರಿನಿಡಾಡ್ ಪ್ರಧಾನಿ ಡಾ. ಕೀತ್ ರೌಲಿ ಖಚಿತಪಡಿಸಿದ್ದು, ಐಸಿಸಿಯು ಸಮಗ್ರ ಭದ್ರತಾ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದ್ದಾರೆ.

ಭಾರತವು ಸೇರಿದಂತೆ ವಿಶ್ವದ 20 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ವೆಸ್ಟ್‌ ಇಂಡೀಸ್‌ನ 6 ಸ್ಥಳಗಳು ಸೇರಿ 9 ಸ್ಥಳಗಳಲ್ಲಿ ಪಂದ್ಯಾವಳಿ ನಡೆಯಲಿದೆ.

ವೆಸ್ಟ್ ಇಂಡೀಸ್‌ನ ಆ್ಯಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಪಂದ್ಯಗಳು ನಡೆಯಲಿವೆ.

ಅಮೆರಿಕದ ಫ್ಲಾರಿಡಾ, ನ್ಯೂಯಾರ್ಕ್ ಮತ್ತು ಟೆಕ್ಸಾಸ್‌ನಲ್ಲಿಯೂ ಪಂದ್ಯಗಳನ್ನು ಆಯೋಜಿಸಲಾಗಿದ್ದು, ಅಲ್ಲಿ ಯಾವುದೇ ಸಮಸ್ಯೆ ಇಲ್ಲ.

ವಿಂಡೀಸ್‌ನ ಟ್ರಿನಿಡಾಡ್ ಮತ್ತು ಗಯಾನಾದಲ್ಲಿ ಎರಡೂ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ಬಾರ್ಬಡೋಸ್‌ನಲ್ಲಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.