ADVERTISEMENT

ಟಿ20 ವಿಶ್ವಕಪ್‌: ರೋಹಿತ್ ಶರ್ಮಾ ರಾಯಭಾರಿ

ಪಿಟಿಐ
Published 25 ನವೆಂಬರ್ 2025, 16:27 IST
Last Updated 25 ನವೆಂಬರ್ 2025, 16:27 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

–ಪಿಟಿಐ ಚಿತ್ರ

ಮುಂಬೈ: ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮುಂದಿನ ಫೆಬ್ರುವರಿ– ಮಾರ್ಚ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ಹೆಸರಿಸಲಾಗಿದೆ. ರೋಹಿತ್ ಅವರು ಈ ಹಿಂದಿನ (2024ರ) ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನೇತೃತ್ವ ವಹಿಸಿದ್ದರು.

ADVERTISEMENT

ಐಸಿಸಿ ಅಧ್ಯಕ್ಷ ಜಯ್‌ ಶಾ ಈ ಘೋಷಣೆ ಮಾಡಿದರು. ರೋಹಿತ್ ಅವರು ಟಿ20 ಪಂದ್ಯಗಳಲ್ಲಿ 32.01 ಸರಾಸರಿಯಲ್ಲಿ 4231 ರನ್ ಗಳಿಸಿದ್ದಾರೆ. 140.89 ಸ್ಟ್ರೈಕ್‌ ರೇಟ್ ಹೊಂದಿದ್ದಾರೆ. ಭಾರತ ಕಳೆದ ವರ್ಷ ವಿಶ್ವಕಪ್ ಗೆದ್ದು, 11 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸಿದ ಬಳಿಕ ಅವರು ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.