ADVERTISEMENT

ಟಿ20 ವಿಶ್ವಕಪ್ ವಿಜೇತರಿಗೆ ₹12 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 16:18 IST
Last Updated 10 ಅಕ್ಟೋಬರ್ 2021, 16:18 IST
ಟಿ20 ವಿಶ್ವಕಪ್
ಟಿ20 ವಿಶ್ವಕಪ್   

ದುಬೈ: ಇದೇ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ವಿಜೇತರಿಗೆ ₹ 12 ಕೋಟಿ ನಗದು ಬಹುಮಾನ ಒಲಿಯಲಿದೆ.

ರನ್ನರ್ಸ್ ಅಪ್ ತಂಡವು ಸುಮಾರು ಆರು ಕೋಟಿ ರೂಪಾಯಿ ಪಡೆಯಲಿದೆ. ಇದೇ 17 ರಿಂದ ನವೆಂಬರ್‌ 14ರವರೆಗೆ ಯುಎಇ ಮತ್ತು ಒಮನ್‌ನಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಗೆ ಭಾರತವು ಆತಿಥ್ಯ ವಹಿಸುತ್ತಿದೆ.

ಐಸಿಸಿಯು ಒಟ್ಟು ಬಹುಮಾನ ಮೊತ್ತವನ್ನು ₹ 42 ಕೋಟಿ ನಿಗದಿಪಡಿಸಿದೆ. ಸೆಮಿಫೈನಲ್‌ಗಳಲ್ಲಿ ಸೋತ ತಂಡಗಳೂ ತಲಾ ಮೂರು ಕೋಟಿ ರೂಪಾಯಿ ಪಡೆಯಲಿವೆ. ಪ್ರತಿಯೊಂದು ಹಂತದಲ್ಲಿಯೂ ನಗದು ಪುರಸ್ಕಾರಗಳು ತಂಡಗಳಿಗೆ ಸಿಗಲಿವೆ.

ADVERTISEMENT

ಸೆಮಿಫೈನಲ್ ಪ್ರವೇಶಿಸುವುದನ್ನು ತಪ್ಪಿಸಿಕೊಂಡ ತಂಡಗಳಿಗೆ ₹53 ಲಕ್ಷ, ಮೊದಲ ಸುತ್ತಿನಲ್ಲಿ ಸೋತ ತಂಡಗಳಿಗೆ ₹ 30 ಲಕ್ಷ ನೀಡಲಾಗುವುದು ಎಂದು ಐಸಿಸಿಯು ಭಾನುವಾರ ತಿಳಿಸಿದೆ.

2016ರ ಟೂರ್ನಿಯ ಮಾದರಿಯಲ್ಲಿ ಸೂಪರ್ 12ರಲ್ಲಿ ಜಯಿಸುವ ತಂಡಗಳಿಗೆ ಬೋನಸ್‌ ಕೂಡ ಇರಲಿದೆ.

ಪಾನೀಯ ವಿರಾಮ

ಟಿ20 ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಇನ್ನು ಮುಂದೆ ಇನಿಂಗ್ಸ್‌ನಲ್ಲಿ ಎರಡು ಪಾನೀಯ ವಿರಾಮಗಳು ಇರಲಿವೆ. ಪ್ರತಿಯೊಂದು ವಿರಾಮದ ಅವಧಿಯು ಎರಡೂವರೆ ನಿಮಿಷ ಇರಲಿದೆ. ಪ್ರತಿ ಇನಿಂಗ್ಸ್‌ನ ಮಧ್ಯಂತರದಲ್ಲಿ ಈ ವಿರಾಮ ಪಡೆಯಬಹುದು.

ಈ ಮೊದಲು ಇನಿಂಗ್ಸ್‌ಗೆ ಒಂದು ವಿರಾಮ ಮಾತ್ರ ಇತ್ತು. ಇದೀಗ ಅಧಿಕೃತ ಪ್ರಸಾರಕರಿಗೆ ಜಾಹೀರಾತು ಆದಾಯ ಹೆಚ್ಚಿಸಲು ಹೊಸ ನಿಯಮ ಅನುಕೂಲವಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.