ADVERTISEMENT

ಟಿ20ಯಿಂದ ದೂರ ಸರಿದಿಲ್ಲ: ರೋಹಿತ್‌ ಶರ್ಮಾ

ಪಿಟಿಐ
Published 9 ಜನವರಿ 2023, 19:32 IST
Last Updated 9 ಜನವರಿ 2023, 19:32 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ   

ಗುವಾಹಟಿ: ಟಿ20 ಕ್ರಿಕೆಟ್‌ ಮಾದರಿಯಿಂದ ದೂರ ಸರಿಯುವ ಯಾವುದೇ ಚಿಂತನೆ ಮಾಡಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

‘ಬೆನ್ನುಬೆನ್ನಿಗೆ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಮೂರೂ ಮಾದರಿಗಳನ್ನು (ಟೆಸ್ಟ್‌, ಏಕದಿನ ಮತ್ತು ಟಿ20) ಆಡುವ ಆಟಗಾರರಿಗೆ ಕೆಲವೊಮ್ಮೆ ವಿಶ್ರಾಂತಿ ನೀಡಬೇಕಾಗುತ್ತದೆ. ಆದ್ದರಿಂದ ನನಗೂ ವಿಶ್ರಾಂತಿ ನೀಡಲಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನ್ಯೂಜಿಲೆಂಡ್‌ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿದ್ದೇವೆ. ಐಪಿಎಲ್‌ ಬಳಿಕ ಏನಾಗುತ್ತದೆ ಎಂಬುದನ್ನು ನೋಡೋಣ. ತಕ್ಷಣದಿಂದಲೇ ಚುಟುಕು ಕ್ರಿಕೆಟ್‌ ಮಾದರಿಯನ್ನು ಬಿಟ್ಟುಬಿಡುವ ಯೋಚನೆಯನ್ನಂತೂ ಮಾಡಿಲ್ಲ’ ಎಂದರು.

ADVERTISEMENT

2024ರ ಟಿ20ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ರೂಪಿಸುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ಹೇಳಿದ್ದವು. ಇದರಿಂದ ರೋಹಿತ್‌, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್‌ ಅವರನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕಡೆಗಣಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.