ADVERTISEMENT

ರೋ–ಕೊ ಎದುರಿಸುವುದು ನಮಗೆ ಹೊಸತಲ್ಲ: ಬವುಮಾ ಮಾತಿನ ಮರ್ಮವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 11:38 IST
Last Updated 2 ಡಿಸೆಂಬರ್ 2025, 11:38 IST
<div class="paragraphs"><p>ತೆಂಬ ಬವುಮಾ</p></div>

ತೆಂಬ ಬವುಮಾ

   

(ಪಿಟಿಐ ಚಿತ್ರ)

ರಾಯ್‌ಪುರ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುವ ಭಾರತ ತಂಡವನ್ನು ಎದುರಿಸುವುದು ನಮಗೆ ಹೊಸದೇನು ಅಲ್ಲ. ಆದರೆ, ಅವರು ತಂಡದಲ್ಲಿ ಇರುವುದರಿಂದ ಟೀಂ ಇಂಡಿಯಾದ ಬಲ ಹೆಚ್ಚಾಗಲಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಹೇಳಿದ್ದಾರೆ.

ADVERTISEMENT

ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯನ್ನು 0–2ರ ಅಂತರದಲ್ಲಿ ಭಾರತದ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ, ಏಕದಿನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಹಾಗೂ ರೋಹಿತ್ ಶರ್ಮಾ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು.

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ, ‘ಆ ಇಬ್ಬರು ಆಟಗಾರರು ಭಾರತ ತಂಡಕ್ಕೆ ಮರಳಿರುವುದರಿಂದ ಅವರ ತಂಡಕ್ಕೆ ಬಲ ಬರಲಿದೆ. ಸರಣಿಯ ಆರಂಭದಲ್ಲೇ ನಾವು ಹೇಳಿದಂತೆ ಆ ಇಬ್ಬರೂ ಸಾಕಷ್ಟು ಅನುಭವ, ಕೌಶಲ ಹೊಂದಿದ್ದಾರೆ. ಹಾಗಾಗಿ ಈ ಇಬ್ಬರ ಉಪಸ್ಥಿತಿ ಆ ತಂಡಕ್ಕೆ ಪ್ರಯೋಜನಕಾರಿ’ ಎಂದರು.

ನಾವು ಭಾರತ ತಂಡವನ್ನು ಹಲವು ಬಾರಿ ಎದುರಿಸಿದ್ದೇವೆ. ಅದರಲ್ಲಿ ಸೋಲು–ಗೆಲುವು ಎರಡನ್ನೂ ನಾವು ನೋಡಿದ್ದೇವೆ. ಈ ಅಂಕಿ ಅಂಶಗಳು ಸರಣಿಯನ್ನು ಮತ್ತಷ್ಟು ರೋಮಾಂಚನಗೊಳಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.