ADVERTISEMENT

ಇವರು ಟೆಸ್ಟ್‌ ಕ್ರಿಕೆಟ್‌ ಅನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ: ಹರಭಜನ್ ಸಿಂಗ್

ಪಿಟಿಐ
Published 17 ನವೆಂಬರ್ 2025, 9:33 IST
Last Updated 17 ನವೆಂಬರ್ 2025, 9:33 IST
   

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಪಂದ್ಯಕ್ಕಾಗಿ ಈಡನ್‌ ಗಾರ್ಡನ್‌ನಲ್ಲಿ ನೀಡಲಾಗಿದ್ದ ಬೌಲಿಂಗ್‌ ಪಿಚ್‌ ತರಹದ ಪಿಚ್‌ಗಳು ಟೆಸ್ಟ್‌ ಕ್ರಿಕೆಟ್‌ ಅನ್ನು ನಾಶಪಡಿಸಲು ಸಹಾಯ ಮಾಡುತ್ತಿವೆ. ರೆಸ್ಟ್‌ ಇನ್‌ ಪೀಸ್‌ ಟೆಸ್ಟ್‌ ಕ್ರಿಕೆಟ್‌ ಎಂದು ಭಾರತ ತಂಡದ ಮಾಜಿ ಆಟಗಾರ ಹರಭಜನ್ ಸಿಂಗ್ ಹೇಳಿದ್ದಾರೆ.

ಕೋಲ್ಕತ್ತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 30 ರನ್‌ಗಳ ಅಂತರದಲ್ಲಿ ಸೋಲನುಭವಿಸಿತ್ತು. ಅದರ ನಂತರ ಮಾಜಿ ಆಟಗಾರರು ಪಿಚ್‌ ಕುರಿತು ಕಿಡಿಕಾರುತ್ತಿದ್ದಾರೆ.

ಸರಿಯಾಗಿ ಸಿದ್ದಪಡಿಸದ ಹಾಗೂ ಬೌಲಿಂಗ್‌ ಸಹಾಯಕ ಪಿಚ್‌ಗಳು ಆಟಗಾರರ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗುತ್ತದೆ. ಇಂತಹ ಪಿಚ್‌ನಲ್ಲಿ ಪಂದ್ಯಗಳನ್ನು ಗೆಲ್ಲಬಹುದು, ಆದರೆ ಆಟಗಾರರ ಬೆಳವಣಿಗೆಗೆ ಯಾವುದೇ ಸಹಾಯವಾಗುವುದಿಲ್ಲ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ಗೆ ಈ ರೀತಿಯ ಪಿಚ್‌ಗಳು ಮಾರಕವಾಗಲಿದೆ ಎಂದು ಹೇಳಿದ್ದಾರೆ.

ADVERTISEMENT

ಪಂದ್ಯ ಗೆದ್ದಾಗ ಯಾರೂ ಕೂಡ ಇದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ಹಲವು ವರ್ಷಗಳಿಂದ ಇವರು ಇದೇ ರೀತಿಯ ಪಿಚ್‌ ಸಿದ್ದಪಡಿಸುತ್ತಿದ್ದಾರೆ. ಇದು ತಪ್ಪು. ಇಂತಹ ಪಿಚ್‌ನಲ್ಲಿ ವಿಕೆಟ್‌ ಪಡೆಯುವ ಮೂಲಕ ಕೆಲವರು ದೊಡ್ಡ ಬೌಲರ್‌ ಆಗುತ್ತಿದ್ದಾರೆ ಎಂದಿದ್ದಾರೆ.

ಇದೇ ಮೈದಾನದಲ್ಲಿ 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಡೆದ ಟೆಸ್ಟ್‌ ಪಂದ್ಯದಲ್ಲಿ ಹರಭಜನ್ ಸಿಂಗ್ 13 ವಿಕೆಟ್‌ ಪಡೆದಿದ್ದರು.

ಮೊದಲ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಉಭಯ ತಂಡಗಳು 200 ರನ್‌ ಗಡಿದಾಟುವಲ್ಲಿ ವಿಫಲವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.