ADVERTISEMENT

ಟೆಸ್ಟ್ ಕ್ರಿಕೆಟ್ | ಕೇನ್ ವಿಲಿಯಮ್ಸನ್ ಶತಕ: ಜಯದತ್ತ ದಾಪುಗಾಲಿಟ್ಟ ಕಿವೀಸ್

ಏಜೆನ್ಸೀಸ್
Published 16 ಡಿಸೆಂಬರ್ 2024, 13:41 IST
Last Updated 16 ಡಿಸೆಂಬರ್ 2024, 13:41 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

– ಎಕ್ಸ್ ಚಿತ್ರ

ಹ್ಯಾಮಿಲ್ಟನ್: ಕೇನ್ ವಿಲಿಯಮ್ಸನ್ ಅವರ ಅಮೋಘ ಶತಕದ ಬಲದಿಂದ ಆತಿಥೇಯ ನ್ಯೂಜಿಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಬೃಹತ್ ಗುರಿಯೊಡ್ಡಿದೆ. 

ADVERTISEMENT

ಪಂದ್ಯದ 3ನೇ ದಿನವಾದ ಸೋಮವಾರ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್‌ಗೆ 658 ರನ್‌ಗಳ ಗೆಲುವಿನ ಗುರಿಯೊಡ್ಡಿದೆ. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ದಿನದಾಟದ ಅಂತ್ಯಕ್ಕೆ 6 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 18 ರನ್ ಗಳಿಸಿ, ಸೋಲಿನ ಭೀತಿಯಲ್ಲಿದೆ.

ಮೊದಲ ಇನಿಂಗ್ಸ್‌ನಲ್ಲಿ 204 ರನ್‌ಗಳ ಮುನ್ನಡೆ ಗಳಿಸಿದ್ದ ನ್ಯೂಜಿಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 453 ರನ್‌ ಗಳಿಸಿತು. ಕೇನ್ ವಿಲಿಯಮ್ಸನ್ (156; 204ಎ, 4X20, 6X1) ಸುಂದರ ಶತಕ ಸಿಡಿಸಿದರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್:

ನ್ಯೂಜಿಲೆಂಡ್: 97.1 ಓವರ್‌ಗಳಲ್ಲಿ 347. ಇಂಗ್ಲೆಂಡ್: 35.4 ಓವರ್‌ಗಳಲ್ಲಿ 143.

ಎರಡನೇ ಇನಿಂಗ್ಸ್:

ನ್ಯೂಜಿಲೆಂಡ್: 101.1 ಓವರ್‌ಗಳಲ್ಲಿ 453 (ವಿಲ್ ಯಂಗ್ 60, ಕೇನ್ ವಿಲಿಯಮ್ಸನ್ 156, ರಚಿನ್ ರವೀಂದ್ರ 44, ಡ್ಯಾರಿಲ್ ಮಿಚೆಲ್ 60, ಟಾಮ್ ಬ್ಲಂಡೆಲ್ ಔಟಾಗದೆ 44, ಮಿಚೆಲ್ ಸ್ಯಾಂಟನರ್ 49, ಬೆನ್ ಸ್ಟೋಕ್ಸ್ 52ಕ್ಕೆ2, ಶೋಯಬ್ ಬಶೀರ್ 170ಕ್ಕೆ2, ಜೇಕಬ್ ಬೆತೆಲ್ 72ಕ್ಕೆ3) ಇಂಗ್ಲೆಂಡ್: 6 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 18 (ಜೇಕಬ್ ಬೆತೆಲ್ ಬ್ಯಾಟಿಂಗ್ 9) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.