ವಿರಾಟ್ ಕೊಹ್ಲಿ
ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆಡಿದ 68 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ 40ರಲ್ಲಿ ಗೆಲುವು ಸಾಧಿಸಿದ್ದಾರೆ.
ಈಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿ ತಮ್ಮ ಪಯಣದ ಹಾದಿಯನ್ನು ನೆನೆಸಿಕೊಂಡು, ಅಭಿಮಾನಿಗಳಿಗೆ ಭಾವುಕ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ
‘ಇದು 14 ವರ್ಷಗಳ ಹಿಂದೆ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ನೀಲಿ ಜರ್ಸಿ ಧರಿಸಿದ್ದಾಗ, ಈ ಪ್ರಯಾಣ ಇಷ್ಟು ದೂರ ಬರಲಿದೆ ಎಂದು ನಿಜಕ್ಕೂ ಊಹಿಸಿರಲಿಲ್ಲ. ಟೆಸ್ಟ್ ಕ್ರಿಕೆಟ್ ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು, ನಾನು ಜೀವನಪರ್ಯಂತ ಪಾಲಿಸಬೇಕಾದ ಪಾಠಗಳನ್ನು ಕಲಿಸಿತು.
‘ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ವೈಯಕ್ತಿಕತೆಯಿದೆ. ದೀರ್ಘ ದಿನಗಳು, ಯಾರೂ ನೋಡದಿದ್ದರೂ ಸಣ್ಣ ಕ್ಷಣಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ’.
‘ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದೇನೆ, ಅದು ಸುಲಭವಲ್ಲ, ಆದರೆ ಸರಿಯಾದ ನಿರ್ಧಾರ ಎನಿಸುತ್ತದೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ಅದಕ್ಕೆ ನೀಡಿದ್ದೇನೆ, ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಅದು ನನಗೆ ಹಿಂತಿರುಗಿಸಿದೆ. ಆಟಕ್ಕಾಗಿ, ನಾನು ಮೈದಾನ ಹಂಚಿಕೊಂಡ ಜನರೊಂದಿಗೆ ಮತ್ತು ದಾರಿಯುದ್ದಕ್ಕೂ ನನ್ನನ್ನು ನೋಡುವಂತೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞತೆ ಹೇಳುತ್ತೇನೆ. ತುಂಬಿದ ಹೃದಯದಿಂದ ಹೊರಡುತ್ತಿದ್ದೇನೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ನಾನು ಯಾವಾಗಲೂ ಮುಗುಳುನಗೆಯೊಂದಿಗೆ ನೆನಪಿಸಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.