ADVERTISEMENT

ಈ ಸಾರಿಯ ಐಪಿಎಲ್‌ ಪಂದ್ಯಗಳು ದಾಖಲೆಯ ವೀಕ್ಷಣೆ: ಜಿಯೊ ಸ್ಟಾರ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 20:26 IST
Last Updated 19 ಜೂನ್ 2025, 20:26 IST
   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯ ಟೂರ್ನಿಯನ್ನು ದಾಖಲೆಯ ಸಮಯ ವೀಕ್ಷಿಸಲಾಗಿದೆ ಎಂದು ಅಧಿಕೃತ ಪ್ರಸಾರಕ ಜಿಯೊ ಸ್ಟಾರ್ ತಿಳಿಸಿದೆ.

2025ರ ಐಪಿಎಲ್ ಟೂರ್ನಿಯನ್ನು ಟೆಲಿವಿಷನ್ ಮತ್ತು ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮುಂತಾದ ಇಂಟರ್ನೆಟ್ ಆಧಾರಿತ ಸಾಧನಗಳ ಮೂಲಕ 84,000 ಕೋಟಿಗೂ ಹೆಚ್ಚು ನಿಮಿಷಗಳ ಕಾಲ ವೀಕ್ಷಣೆ ಮಾಡಲಾಗಿದೆ. 

ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯವು ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೀಕ್ಷಣೆಗೊಳಗಾದ ಟಿ20 ಪಂದ್ಯವಾಗಿದೆ. ಆ ಪಂದ್ಯವನ್ನು ವಿವಿಧ ಮಾಧ್ಯಮಗಳ ಮೂಲಕ 3,170 ಕೋಟಿ ನಿಮಿಷಗಳ ಕಾಲ ವೀಕ್ಷಿಸಲಾಗಿದೆ. ಟಿವಿಯಲ್ಲಿ ಆ ಪಂದ್ಯವನ್ನು 16.9 ಕೋಟಿ ಜನರು ವೀಕ್ಷಿಸಿದರು. ಡಿಜಿಟಲ್ ಸಾಧನಗಳಲ್ಲಿ ಪಂದ್ಯವು 89.2 ಕೋಟಿ ವಿಡಿಯೊ ವೀಕ್ಷಣೆ ಪಡೆಯಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಯೊಸ್ಟಾರ್‌ನ ಡಿಜಿಟಲ್ ವೀಕ್ಷಣೆಯಲ್ಲಿ ಈ ಬಾರಿ ಶೇ 29ರಷ್ಟು ಏರಿಕೆಯಾಗಿದೆ.

ADVERTISEMENT

ಟೆಲಿವಿಷನ್ ವಿಭಾಗದಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರೇಕ್ಷಕರು 45,600 ನಿಮಿಷಗಳ ಕಾಲ ಐಪಿಎಲ್ ನೇರಪ್ರಸಾರವನ್ನು ವೀಕ್ಷಿಸಿದ್ದಾರೆ. ಇದೂ ಕೂಡ ಐಪಿಎಲ್ ಇತಿಹಾಸದಲ್ಲೇ ದಾಖಲೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.