ಕೆಎಸ್‌ಸಿಎ ಕೋಲ್ಟ್ಸ್ ಪರ 7 ವಿಕೆಟ್ ಪಡೆದ ಶಿಖರ್ ಶೆಟ್ಟಿ
–ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ಮೈಸೂರು: ವಿಕೆಟ್ ಕೀಪರ್ ಹರ್ಷಿಲ್ ಧರ್ಮಾನಿ (ಔಟಾಗದೇ 94) ಮತ್ತು ನಾಯಕ ಅನೀಶ್ವರ್ ಗೌತಮ್ (ಔಟಾಗದೇ 73) ಅಜೇಯ ಶತಕದ ಜೊತೆಯಾಟದ (131) ನೆರವಿನಿಂದ ಕೆಎಸ್‌ಸಿಎ ಕೋಲ್ಟ್ಸ್ ತಂಡವು ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬರೋಡ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.
ಕ್ಯಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದ ಎರಡನೇ ದಿನವಾದ ಮಂಗಳವಾರ 25 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಕೋಲ್ಟ್ಸ್ ಪರ ಆರಂಭಿಕರಾದ ಪ್ರಖರ್ ಚತುರ್ವೇದಿ (76) ಹಾಗೂ ಎಸ್. ತೌಫಿಕ್ (50) ಮೊದಲ ವಿಕೆಟ್‌ಗೆ 103 ರನ್‌ಗಳ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದರು. ಮೂರನೇ ವಿಕೆಟ್‌ಗೆ ಜೊತೆಯಾದ ಹರ್ಷಿಲ್ ಹಾಗೂ ಅನೀಶ್ವರ್ ಗೌತಮ್ ಎದುರಾಳಿಗಳನ್ನು ಕಾಡಿದರು. ತಂಡವು ದಿನದಂತ್ಯಕ್ಕೆ 2 ವಿಕೆಟ್‌ಗೆ 298 ರನ್ ಕಲೆಹಾಕಿತು.
ಇದಕ್ಕೂ ಮುನ್ನ, ಬರೋಡ ತಂಡವನ್ನು ಕೋಲ್ಟ್ಸ್‌ನ ಬೌಲರ್ ಶಿಖರ್ ಶೆಟ್ಟಿ 86 ರನ್ನಿಗೆ ಏಳು ವಿಕೆಟ್ ಪಡೆದು ಮಿಂಚಿದರು. ಬರೋಡ 209 ರನ್‌ಗೆ ಆಲೌಟ್ ಆದರೂ ಅಲ್ಪ ಮುನ್ನಡೆ ಪಡೆಯುವಲ್ಲಿ ಯಶಸ್ವಿ ಆಯಿತು.
ಸಂಕ್ಷಿಪ್ತ ಸ್ಕೋರ್
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ
ಮೊದಲ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 47.3 ಓವರ್‌ಗಳಲ್ಲಿ 184; ಬರೋಡ ಕ್ರಿಕೆಟ್ ಸಂಸ್ಥೆ: 59 ಓವರ್‌ಗಳಲ್ಲಿ 209 (ಭಾರ್ಗವ್ ಭಟ್ 35. ಶಿಖರ್ ಶೆಟ್ಟಿ 86ಕ್ಕೆ7, ಮೊಹ್ಸಿನ್ ಖಾನ್ 60ಕ್ಕೆ2)
ಎರಡನೇ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 69 ಓವರ್‌ಗಳಲ್ಲಿ 2 ವಿಕೆಟ್‌ಗೆ 298 (ಹರ್ಷಿಲ್ ಧರ್ಮಾನಿ ಔಟಾಗದೇ 94, ಅನೀಶ್ವರ್ ಗೌತಮ್ ಔಟಾಗದೇ 73, ಪ್ರಖರ್ ಚತುರ್ವೇದಿ 76, ಎಸ್.ತೌಫಿಕ್ 50).
ಎಸ್‌ಜೆಸಿಇ ಕ್ರೀಡಾಂಗಣ, ಮೈಸೂರು
ಮೊದಲ ಇನಿಂಗ್ಸ್: ಆಂಧ್ರ ಕ್ರಿಕೆಟ್ ಸಂಸ್ಥೆ: 23.2 ಓವರ್‌ಗಳಲ್ಲಿ 87; ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 105.1 ಓವರ್‌ಗಳಲ್ಲಿ 455 (ಏಕಾಂತ್ ಸೇನ್ 178, ನವೀನ್ ಕನ್ವರ್ 45. ಎಂ. ಆಂಜನೇಯುಲು 143ಕ್ಕೆ7;
ಎರಡನೇ ಇನಿಂಗ್ಸ್: ಆಂಧ್ರ ಕ್ರಿಕೆಟ್ ಸಂಸ್ಥೆ: 43 ಓವರ್‌ಗಳಲ್ಲಿ 1 ವಿಕೆಟ್‌ಗೆ 198 (ಅಭಿಷೇಕ್ ರೆಡ್ಡಿ ಔಟಾಗದೇ 98, ಸಿ.ಆರ್. ಜ್ಞಾನೇಶ್ವರ್ 50, ಎಂ. ಹೇಮಂತ್ ರೆಡ್ಡಿ ಔಟಾಗದೇ 40).
ಆಲೂರು 2
ಮೊದಲ ಇನಿಂಗ್ಸ್: ಕೆಎಸ್‌ಸಿಎ ಇಲೆವೆನ್: 80.5 ಓವರುಗಳಲ್ಲಿ 270; ತ್ರಿಪುರ ಕ್ರಿಕೆಟ್ ಸಂಸ್ಥೆ: 92 ಓವರುಗಳಲ್ಲಿ 6 ವಿಕೆಟ್‌ಗೆ 246 (ವಿಕ್ರಮ್ ಕುಮಾರ್ ದಾಸ್ 51, ಋತುರಾಜ್ ಘೋಷ್ 42, ಸೆಂತು ಸರ್ಕಾರ್ ಔಟಾಗದೇ 39; ವಿದ್ವತ್ ಕಾವೇರಪ್ಪ 18ಕ್ಕೆ2)
ಆಲೂರು 3
ಮೊದಲ ಇನಿಂಗ್ಸ್: ಗೋವಾ ಕ್ರಿಕೆಟ್ ಸಂಸ್ಥೆ: 165; ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್: 46.3 ಓವರುಗಳಲ್ಲಿ 97 (ದರ್ಶನ್ ಮಿಶಾಲ್ 29ಕ್ಕೆ4, ಮೋಹಿತ್ ರೆಡ್ಕರ್ 21ಕ್ಕೆ3);
ಎರಡನೇ ಇನಿಂಗ್ಸ್: ಗೋವಾ: 68 ಓವರುಗಳಲ್ಲಿ 7ಕ್ಕೆ198 (ಮಂತನ್ ಕುತ್ಕರ್ 60, ಲಲಿತ್ ಯಾದವ್ ಔಟಾಗದೇ 42; ಶ್ರೀಶ ಆಚಾರ್ 58ಕ್ಕೆ4, ನಿಶ್ಚಿತ್ ರಾವ್ 26ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.