ADVERTISEMENT

TNPL: ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟ ಬೌಲರ್...ಹೀಗೊಂದು ದಾಖಲೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2023, 10:11 IST
Last Updated 14 ಜೂನ್ 2023, 10:11 IST
ಟ್ಟಿಟರ್ ಸ್ಕ್ರೀನ್‌ಶಾಟ್
ಟ್ಟಿಟರ್ ಸ್ಕ್ರೀನ್‌ಶಾಟ್    ಕೃಪೆ:

ಕೊಯಮತ್ತೂರು: ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟಿರುವ ಬೌಲರ್ ಅಪಖ್ಯಾತಿಗೆ ಒಳಗಾಗಿದ್ದಾರೆ.

ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ನಡುವೆ ಮಂಗಳವಾರ ನಡೆದ ಪಂದ್ಯದಲ್ಲಿ ಇದು ನಡೆದಿದೆ.

ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ 20ನೇ ಓವರ್‌ನ ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಕೊನೆಯ ಎಸೆತದಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಅಪಖ್ಯಾತಿಗೆ ಒಳಗಾಗಿದ್ದಾರೆ.

ADVERTISEMENT

ಅದೇ ಓವರ್‌ನ ಮೊದಲ ಐದು ಎಸೆತಗಳಲ್ಲಿ ಎಂಟು ರನ್ ಬಿಟ್ಟುಕೊಟ್ಟಿರುವ ತನ್ವರ್ ಅಂತಿಮವಾಗಿ ಒಟ್ಟು 26 ರನ್ ನೀಡಿದರು.

ತನ್ವರ್ ಅಂತಿಮ ಓವರ್‌ನ ಕೊನೆಯ ಎಸೆತ ಹೀಗಿತ್ತು:

NB, NB+6, NB+2, WD, 6

ತನ್ವರ್ ಎಸೆದ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಲ್ಡ್ ಮಾಡಿದ್ದರು. ಆದರೆ ದುರದೃಷ್ಟವಶಾತ್ ನೋಬಾಲ್ ಆಗಿತ್ತು. ಬಳಿಕದ ಎಸೆತವನ್ನು ಬ್ಯಾಟರ್ ಸಿಕ್ಸರ್ ಬಾರಿಸಿದರು. ಅದು ಕೂಡ ನೋ ಬಾಲ್ ಆಗಿತ್ತು. ಮುಂದಿನ ನೋ ಬಾಲ್ ಎಸೆತದಲ್ಲಿ ಬ್ಯಾಟರ್ ಎರಡು ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಬ್ಯಾಟರ್ ಸಿಕ್ಸರ್ ಬಾರಿಸುವುದರೊಂದಿಗೆ 18 ರನ್ ಬಿಟ್ಟುಕೊಟ್ಟರು.

ಬಳಿಕ ಗಿಲ್ಲಿಸ್ ಒಡ್ಡಿದ 218 ರನ್ ಗುರಿ ಬೆನ್ನಟ್ಟಿದ ಸ್ಪಾರ್ಟನ್ಸ್ ಒಂಬತ್ತು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ 52 ರನ್ ಅಂತರದ ಸೋಲಿಗೆ ಶರಣಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.