ADVERTISEMENT

ರಾಹುಲ್‌ ಮಾಡೆಲಿಂಗ್‌ಗೆ ಹೋಗಲಿ: ಸಾಮಾಜಿಕ ತಾಣಗಳಲ್ಲಿ ಟ್ರೋಲ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 17:17 IST
Last Updated 26 ಡಿಸೆಂಬರ್ 2018, 17:17 IST
ಕೆ.ಎಲ್. ರಾಹುಲ್‌
ಕೆ.ಎಲ್. ರಾಹುಲ್‌   

ಬೆಂಗಳೂರು: ಭಾರತ ತಂಡದಿಂದ ಕೈಬಿಟ್ಟ ಕೆ.ಎಲ್‌.ರಾಹುಲ್‌ ಇನ್ನು ಮಾಡೆಲಿಂಗ್‌ ಮಾಡುತ್ತ ಕಾಲ ಕಳೆಯುವುದೇ ಒಳ್ಳೆಯದು. ತಮ್ಮ ಸ್ಥಾನವನ್ನು ಮಯಂಕ್ ಅಗರವಾಲ್‌ ಸಮರ್ಥವಾಗಿ ತುಂಬಿಕೊಂಡಿದ್ದಾರೆ. ಹೀಗಾಗಿ ರಾಹುಲ್ ನಿವೃತ್ತಿ ಘೋಷಿಸುವುದು ಒಳಿತು..?

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮಯಂಕ್ ಅಗರವಾಲ್‌ ಮಿಂಚುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಕೆ.ಎಲ್.ರಾಹುಲ್‌ ವಿರುದ್ಧ ಹರಿದು ಬಂದ ಟ್ರೋಲ್‌ಗಳಲ್ಲಿ ಕಂಡ ಸಲಹೆಗಳು ಇವು. ಸಿನಿಮಾಗಳ ಸ್ಟಿಲ್‌ಗಳು,ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಜೊತೆಗೆ ಇರುವ ಚಿತ್ರಗಳು ಇತ್ಯಾದಿಗಳನ್ನು ಬಳಸಿಕೊಂಡ ನೆಟ್ಟಿಗರು ರಾಹುಲ್ ಅವರನ್ನು ನಾನಾ ಬಗೆಯಲ್ಲಿ ಟೀಕಿಸಿದ್ದಾರೆ.

ಮಯಂಕ್‌, ರಾಹುಲ್ ಅವರ ಗಡ್ಡ ಸವರುತ್ತಿರುವ ಚಿತ್ರ ಹಾಕಿದ ಕಮಲ್‌ ಗುಪ್ತಾ ‘ನೀನು ಗಡ್ಡ ಬೆಳೆಸುತ್ತಾ ಇರು ಗೆಳೆಯ, ಬ್ಯಾಟಿಂಗ್‌ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ’ ಎಂದು ಹೇಳುವಂತೆ ಬರೆದಿದ್ದಾರೆ.

ಅಮೀರ್ ಖಾನ್‌ ಮತ್ತು ಇತರ ಮೂವರು ಪೊದೆಯ ಎಡೆಯಿಂದ ಇಣುಕು ನೋಡುತ್ತಿರುವ ಚಿತ್ರ ಹಾಕಿರುವ ವಿವೇಕ್ ಪ್ರಜಾತಪಿ, ‘ಮಯಂಕ್ ಅವರ ಆಟವನ್ನು ರಾಹುಲ್‌, ಮುರಳಿ ವಿಜಯ್‌, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಕದ್ದು ನೋಡುತ್ತಿದ್ದಾರೆ’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.