ADVERTISEMENT

ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್: ಭಾರತಕ್ಕೆ ದಕ್ಷಿಣ ಆಫ್ರಿಕಾ ಮೊದಲ ಎದುರಾಳಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 19:26 IST
Last Updated 29 ಜನವರಿ 2019, 19:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಭಾರತ ಕ್ರಿಕೆಟ್ ತಂಡವು 2020ರಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಅಕ್ಟೋಬರ್‌ 24ರಂದು ಈ ಪಂದ್ಯ ನಡೆಯಲಿದೆ. 2016ರಲ್ಲಿ ಭಾರತ ವಿಶ್ವ ಟ್ವೆಂಟಿ–20 ಟೂರ್ನಿಗೆ ಆತಿಥ್ಯ ವಹಿಸಿತ್ತು. ಮಹೇಂದ್ರಸಿಂಗ್ ಧೋನಿ ನಾಯಕತ್ವ ವಹಿಸಿದ್ದ ಆತಿಥೇಯ ತಂಡವು ಸೆಮಿಫೈ ನಲ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಸೋತಿತ್ತು. ಫೈನಲ್‌ನಲ್ಲಿ ವಿಂಡೀಸ್ ಗೆದ್ದಿತ್ತು. ಹಾಲಿ ಚಾಂಪಿಯನ್ ಸೂಪರ್‌ 12ರ ಹಂತದ ಪಂದ್ಯದಲ್ಲಿ ಆಡಲಿದೆ.

ತನ್ನ ಮೊದಲ ಪಂದ್ಯವನ್ನು ಅ.29ರಂದು ಮೆಲ್ಬರ್ನ್‌ನಲ್ಲಿ ಆಡಲಿದೆ. ಅರ್ಹತಾ ಸುತ್ತಿನಲ್ಲಿ ಗೆದ್ದ ತಂಡವನ್ನು ಅದು ಎದುರಿಸಲಿದೆ.

ADVERTISEMENT

ಟ್ವೆಂಟಿ–20 ಮಾದರಿಯ ಮೊದಲ ವಿಶ್ವ ಟೂರ್ನಿಯು 2007ರಲ್ಲಿ ನಡೆದಿತ್ತು. ಆಗ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿತ್ತು. ಭಾರತ ಚಾಂಪಿಯನ್ ಆಗಿತ್ತು.

‘ಆಸ್ಟ್ರೇಲಿಯಾದಲ್ಲಿ ವಿಶ್ವಮಟ್ಟದ ಕ್ರಿಕೆಟ್ ಟೂರ್ನಿ ಆಯೋಜಿಸುವುದು ದೊಡ್ಡ ಕೆಲಸ. ಇಲ್ಲಿಗೆ ವಿಶ್ವದ ಬೇರೆ ಬೇರೆ ಭಾಗಗಳಿಂದ ಕೋಟ್ಯಂತರ ಆಭಿಮಾನಿಗಳು ಬರುವುದು ಖಚಿತ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.

2020ರ ಅ.18ರಿಂದ ಪ್ರಥಮ ಸುತ್ತಿನ ಪಂದ್ಯಗಳು ಆರಂಭವಾಗುತ್ತದೆ. 24ರಿಂದ ನವೆಂಬರ್ 8ರವರೆಗೆ ಸೂಪರ್ 12 ತಂಡಗಳು ಆಡಲಿವೆ. ನವೆಂಬರ್‌ 11 ಮತ್ತು 12ರಂದು ಸೆಮಿಫೈನಲ್ ಪಂದ್ಯಗಳು ಮತ್ತು 15ರಂದು ಫೈನಲ್ ಪಂದ್ಯ ನಡೆಯಲಿದೆ.

**

ಮಹಿಳಾ ಟ್ವೆಂಟಿ–20: ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ

ಮಹಿಳೆಯರ ಐಸಿಸಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

ಭಾರತದ ಮಹಿಳಾ ತಂಡವು 2020ರ ಫೆಬ್ರುವರಿ 21ರಂದು ತನ್ನಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಲಿದೆ. ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 8ರಂದು ಮೆಲ್ಬರ್ನ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.