ದುಬೈ: ಅಜಾನ್ ಅವೈಸ್ ಅವರ ಅಜೇಯ ಶತಕದ ಬಲದಿಂದ ಪಾಕಿಸ್ತಾನ ತಂಡವು ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎಂಟು ವಿಕೆಟ್‌ಗಳಿಂದ ಭಾರತವನ್ನು ಮಣಿಸಿತು.
‘ಎ’ ಗುಂಪಿನಲ್ಲಿರುವ ಭಾರತವು ಮೊದಲ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಭಾನುವಾರ ನಡೆದ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಸೋತು, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಎರಡೂ ಪಂದ್ಯ ಗೆದ್ದಿರುವ ಪಾಕ್ ಅಗ್ರಸ್ಥಾನದಲ್ಲಿದ್ದರೆ, ಅಫ್ಗಾನಿಸ್ತಾನ ಮೂರನೇ ಮತ್ತು ನೇಪಾಲ ನಾಲ್ಕನೇ ಸ್ಥಾನದಲ್ಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆದರ್ಶ್ ಸಿಂಗ್ (62; 81ಎ, 4x4, 6x1), ನಾಯಕ ಉದಯ್ ಸಹಾರನ್ (60;98ಎ, 4x5) ಹಾಗೂ ಸಚಿನ್ ದಾಸ್ (58; 42ಎ, 4x2, 6x3) ಅವರ ಅರ್ಧ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು. ಪಾಕ್ ಪರ ಮೊಹಮ್ಮದ್ ಜೀಶಾನ್ 46ಕ್ಕೆ 4 ವಿಕೆಟ್ ಪಡೆದರು.
ಸವಾಲಿನ 260 ರನ್‌ಗಳ ಗುರಿಯನ್ನು ಪಾಕಿಸ್ತಾನ ತಂಡವು 47 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪಿತು. ಅಜಾನ್ ಅವೈಸ್ (ಔಟಾಗದೆ 105; 130ಎ, 4x10) ಗೆಲುವಿನ ರೂವಾರಿ ಎನಿಸಿದರೆ, ಶಾಹಜೇಬ್ ಖಾನ್ (63; 88ಎ, 4x4, 6x3) ಹಾಗೂ ನಾಯಕ ಸಾದ್ ಬೇಗ್ (ಔಟಾಗದೆ 68; 51ಎ, 4x8, 6x1) ಅವರೂ ಉಪಯುಕ್ತ ಕಾಣಿಕೆ ನೀಡಿದರು.
ಭಾರತವು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಗಳವಾರ ನೇಪಾಳ ತಂಡವನ್ನು ಎದುರಿಸಲಿದೆ. ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೊದಲ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಸಂಕ್ಷಿಪ್ತ ಸ್ಕೋರ್
ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259 (ಉದಯ್ ಸಹಾರನ್ 60, ಆದರ್ಶ್ ಸಿಂಗ್ 62, ಸಚಿನ್ ಧಾಸ್ 58; ಮೊಹಮ್ಮದ್ ಜೀಶಾನ್ 46ಕ್ಕೆ 4).
ಪಾಕಿಸ್ತಾನ: 47 ಓವರ್‌ಗಳಲ್ಲಿ 2 ವಿಕೆಟ್‌ಗೆ 263 (ಅಜಾನ್ ಅವೈಸ್ ಔಟಾಗದೆ 105, ಶಾಹಜೇಬ್ ಖಾನ್ 63, ಸಾದ್ ಬೇಗ್ ಔಟಾಗದೆ 68; ಮುರುಗನ್ ಅಭಿಷೇಕ್ 55ಕ್ಕೆ 2)
ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.