ADVERTISEMENT

U19 World Cup: ಪಾಕ್‌– ಆಸ್ಟ್ರೇಲಿಯಾ ಹಣಾಹಣಿ

ಯುವ ವಿಶ್ವಕಪ್: ಎರಡನೇ ಸೆಮಿಫೈನಲ್

ಪಿಟಿಐ
Published 7 ಫೆಬ್ರುವರಿ 2024, 15:38 IST
Last Updated 7 ಫೆಬ್ರುವರಿ 2024, 15:38 IST
<div class="paragraphs"><p>(ಚಿತ್ರ ಕೃಪೆ:X/@cricketworldcup)</p></div>

(ಚಿತ್ರ ಕೃಪೆ:X/@cricketworldcup)

   

ಬೆನೋನಿ (ದಕ್ಷಿಣ ಆಫ್ರಿಕಾ), : ವೇಗದ ಬೌಲರ್ ನಸೀಮ್ ಶಾ ಈಗಾಗಲೇ ಪಾಕಿಸ್ತಾನ ತಂಡದಲ್ಲಿ ಪ್ರಭಾವಶಾಲಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ತಮ್ಮ ಉಬೇದ್ ಶಾ ಅವರು ಐಸಿಸಿ 19 ವರ್ಷದೊಳಗಿನವ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿದ್ದು, ಪಾಕಿಸ್ತಾನದ ಪ್ರಮುಖ ಅಸ್ತ್ರವಾಗಿದ್ದಾರೆ.

ಇವೆರಡು ತಂಡಗಳ ನಡುವಣ ಎರಡನೇ ಸೆಮಿಫೈನಲ್ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯದ ವಿಜೇತರು ಫೈನಲ್‌ನಲ್ಲಿ ಪ್ರಬಲ ಭಾರತ ತಂಡವನ್ನು ಭಾನುವಾರ ಎದುರಿಸಲಿದ್ದಾರೆ. ಭಾರತ ಒಂಬತ್ತನೇ ಸಲ ಫೈನಲ್‌ನಲ್ಲಿ ಆಡುತ್ತಿದೆ.

ADVERTISEMENT

ಭಾರತ– ಪಾಕಿಸ್ತಾನ ತಂಡಗಳು 2006ರಲ್ಲಿ ಯುವ ವಿಶ್ವಕಪ್‌ ಫೈನಲ್‌ನಲ್ಲಿ ಕೊನೆಯ ಬಾರಿ ಮುಖಾಮುಖಿ ಆಗಿದ್ದವು. ಆ ತಂಡದಲ್ಲಿ ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜ ಆಡಿದ್ದರು. ಆ ಸಲ ಫೈನಲ್‌ನಲ್ಲಿ ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕ್ ತಂಡ ಜಯಶಾಲಿಯಾಗಿತ್ತು.

ಉಬೇದ್, ಹಾಲಿ ವಿಶ್ವಕಪ್‌ನ ಯಶಸ್ವಿ ಬೌಲರ್‌ಗಳ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವೆನ ಮೆಫಕಾ ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲಿ (ಅಫ್ಗಾನಿಸ್ತಾನ ವಿರುದ್ಧ) 26 ರನ್ನಿಗೆ 4 ವಿಕೆಟ್ ಪಡೆದ ಉಬೇದ್ ನಂತರ ಹಿಂತಿರುಗಿ ನೋಡಿಲ್ಲ. ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್ ಪಡೆದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಲೀಗ್‌ನಲ್ಲಿ ಅಜೇಯವಾಗಿದ್ದವು. ಪ್ರಬಲ ಇಂಗ್ಲೆಂಡ್, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳನ್ನು ಬಗ್ಗುಬಡಿದಿದ್ದವು. ಎರಡೂ ತಂಡಗಳು ಪರಿಣಾಮಕಾರಿ ವೇಗಿಗಳನ್ನು ಹೊಂದಿವೆ. ಜೊತೆಗೆ ಕೌಶಲವುಳ್ಳ ಸ್ಪಿನ್ನರ್‌ಗಳಿದ್ದಾರೆ. ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ತೀವ್ರ ಹೋರಾಟ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.