ADVERTISEMENT

U19 World Cup | IND Vs NEP: ಸೆಮಿಗೆ ಲಗ್ಗೆಯಿಡಲು ಭಾರತ ಸಜ್ಜು

ಪಿಟಿಐ
Published 1 ಫೆಬ್ರುವರಿ 2024, 13:36 IST
Last Updated 1 ಫೆಬ್ರುವರಿ 2024, 13:36 IST
ಕ್ರಿಕೆಟ್‌
ಕ್ರಿಕೆಟ್‌   

ಬ್ಲೊಮ್‌ಫೋಂಟೀನ್: ನೇಪಾಳ ತಂಡದ ವಿರುದ್ಧ ಶುಕ್ರವಾರ ನಡೆಯಲಿರುವ ಸೂಪರ್‌ ಸಿಕ್ಸ್‌ ಹಂತದ ಕೊನೆಯ ಪಂದ್ಯದಲ್ಲಿ ಜಯಗಳಿಸುವ ಮೂಲಕ ಭಾರತ ತಂಡವು ಐಸಿಸಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ ಭರ್ಜರಿಯಾಗಿ ಲಗ್ಗೆಯಿಡಲು ತವಕದಿಂದ ಇದೆ.

ಎರಡು ಸೂಪರ್ ಸಿಕ್ಸ್‌ ಗುಂಪುಗಳಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಈ ಟೂರ್ನಿಯ ಸೆಮಿಫೈನಲ್ ತಲುಪಲಿವೆ. ನೇಪಾಳ ಇದುವರೆಗೆ ಒಂದೂ ಜಯಗಳಿಸಿಲ್ಲ.

ಉದಯ್ ಸಹಾರನ್ ನೇತೃತ್ವದ ಪ್ರಬಲ ತಂಡ ಒಂದನೇ ಗುಂಪಿನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿದ್ದು ಆರು ಪಾಯಿಂಟ್ಸ್ ಗಳಿಸಿದೆ.  ಭಾರತ ತಂಡಕ್ಕೆ ಆಯ್ಕೆಯಾಗಿರುವ ಸರ್ಫರಾಜ್ ಖಾನ್ ಅವರ ಸೋದರ ಮುಶೀರ್ ಖಾನ್ ಟೂರ್ನಿಯಲ್ಲಿ 325 ರನ್ ಗಳಿಸಿದ್ದು, ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅವರು 126 ಎಸೆತಗಳಲ್ಲಿ 131 ರನ್ ಬಾರಿಸಿದ್ದು ಒಳ್ಳೆಯ ಲಯದಲ್ಲಿದ್ದಾರೆ. ಇವರೊಂದಿಗೆ ನಾಯಕ ಸಹಾರನ್, ವಿಕೆಟ್ ಕೀಪರ್ ಅರವಳ್ಳಿ ಅವಿನಾಶ್, ಬೀಸು ಹೊಡೆತದ ಆಟಗಾರ ಅರ್ಷಿನ್ ಕುಲಕರ್ಣಿ ಕೂಡ ಕೆಲವು ಪಂದ್ಯಗಳಲ್ಲಿ ಮಿಂಚಿದ್ದಾರೆ.

ADVERTISEMENT

ಎಡಗೈ ಸ್ಪಿನ್ನರ್‌ ಸೌಮಿ ಕುಮಾರ್ ಪಾಂಡೆ ಅವರು ಆ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಬೌಲರ್‌ಗಳ ಯಾದಿಯಲ್ಲಿ ಅವರು ಪಾಕಿಸ್ತಾನದ ಉಬೇದ್ ಶಾ ಮತ್ತು ದಕ್ಷಿಣ ಆಫ್ರಿಕಾ ಕ್ವೆನಾ ಮಫಕಾ ಅವರೊಡನೆ 12 ವಿಕೆಟ್‌ಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಎಡಗೈ ವೇಗಿ ನಮನ್ ತಿವಾರಿ ಸಹ ಎದುರಾಳಿಗಳಿಗೆ ಲಗಾಮು ಹಾಕಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 1.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.