
ದುಬೈ: ಭಾರತ ತಂಡವು, 2026ರ ಜನವರಿ 15 ರಿಂದ ಫೆಬ್ರುವರಿ 6ರವರೆಗೆ ನಡೆಯಲಿರುವ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಮೆರಿಕ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಈ ಟೂರ್ನಿ ನಡೆಯಲಿದೆ.
ಕಣದಲ್ಲಿ ಒಟ್ಟು 16 ತಂಡಗಳಿದ್ದು, ಇವುಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. 23 ದಿನಗಳ ಅವಧಿಯಲ್ಲಿ ಒಟ್ಟು 41 ಪಂದ್ಯಗಳನ್ನು ಆಡಲಾಗುವುದು.
ಭಾರತ, ಅಮೆರಿಕ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳು ‘ಎ’ ಗುಂಪಿನಲ್ಲಿವೆ. ಜಿಂಬಾಬ್ವೆ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನಲ್ಲಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಐರ್ಲೆಂಡ್, ಜಪಾನ್ ಮತ್ತು ಶ್ರೀಲಂಕಾ ‘ಸಿ’ ಗುಂಪಿನಲ್ಲಿವೆ. ತಾಂಜಾನಿಯಾ, ವೆಸ್ಟ್ ಇಂಡೀಸ್, ಅಫ್ಗಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ‘ಡಿ’ ಗುಂಪಿನಲ್ಲಿವೆ.
ಐಸಿಸಿ ಬುಧವಾರ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ತಾಂಜಾನಿಯಾ ಮೊದಲ ಬಾರಿ ಟೂರ್ನಿಯಲ್ಲಿ ಆಡುತ್ತಿದೆ. ಜಪಾನ್ 2020ರಲ್ಲಿ ಮೊದಲ ಬಾರಿ ಆಡಿದ್ದು, ಈಗ ಎರಡನೇ ಬಾರಿ ಅವಕಾಶ ಪಡೆದಿದೆ.
ಪ್ರತಿ ಗುಂಪಿನಲ್ಲಿ ಮೊದಲ ಮೂರು ಸ್ಥಾನ ಪಡೆದ ತಂಡಗಳು ಸೂಪರ್ ಸಿಕ್ಸ್ ಹಂತದಲ್ಲಿ ಆಡಲಿವೆ. ಇವುಗಳು ತಲಾ ಆರರಂತೆ ಎರಡು ಗುಂಪುಗಳಲ್ಲಿ ಆಡಲಿವೆ. ಸೆಮಿಫೈನಲ್‌ನೊಂದಿಗೆ ನಾಕೌಟ್ ಹಂತ ಆರಂಭವಾಗಲಿದೆ. ಸೆಮಿಫೈನಲ್ ಪಂದ್ಯಗಳಿಗೆ ಮತ್ತು ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆ.
ಜನವರಿ 15: ಅಮೆರಿಕ
ಜನವರಿ 17: ಬಾಂಗ್ಲಾದೇಶ
ಜನವರಿ 24: ನ್ಯೂಜಿಲೆಂಡ್
(ಎಲ್ಲ ಪಂದ್ಯಗಳು ಕ್ವೀನ್ಸ್ ಕ್ಲಬ್, ಬುಲವಾಯೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.