ADVERTISEMENT

ಇಂಗ್ಲೆಂಡ್‌ ಯುವ ತಂಡಕ್ಕೆ ಇನಿಂಗ್ಸ್‌ ಮುನ್ನಡೆ

ಪಿಟಿಐ
Published 23 ಜುಲೈ 2025, 0:28 IST
Last Updated 23 ಜುಲೈ 2025, 0:28 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಚೆಮ್ಸ್‌ಫೋರ್ಡ್‌ (ಬ್ರಿಟನ್‌): ವಿಹಾನ್‌ ಮಲ್ಹೋತ್ರಾ ಅವರ ಆಕರ್ಷಕ ಶತಕದ (120 ರನ್‌; 123 ಎ, 4x19, 3x6) ಹೊರತಾಗಿಯೂ ಭಾರತ ಯುವ ತಂಡವು (19 ವರ್ಷದೊಳಗಿವರ) ಇಂಗ್ಲೆಂಡ್‌ ಎದುರಿನ ಮೊದಲ ‘ಟೆಸ್ಟ್‌’ನ ಪ್ರಥಮ ಇನಿಂಗ್ಸ್‌ನಲ್ಲಿ 30 ರನ್ ಹಿನ್ನಡೆ ಅನುಭವಿಸಿತು.

ADVERTISEMENT

ಮೂರನೇ ದಿನದಾಟವಾದ ಮಂಗಳವಾರ, ಸ್ಪಿನ್ನರ್‌ ರಾಲ್ಫೀ ಅಲ್ಬರ್ಟ್‌ (6ಕ್ಕೆ53) ದಾಳಿಗೆ ತತ್ತರಿಸಿದ ಭಾರತ ತಂಡ 58.1 ಓವರ್‌ಗಳಲ್ಲಿ 279 ರನ್‌ಗಳಿಗೆ ಆಲೌಟ್‌ ಆಯಿತು.

ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡವು, ಬೆನ್‌ ಡಾಕಿನ್ಸ್‌ (42 ರನ್‌) ಹಾಗೂ ಆ್ಯಡಂ ಥಾಮಸ್‌ (50 ರನ್‌) ಜೊತೆಯಾಟದ ನೆರವಿನಿಂದ 25 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 93 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಇಂಗ್ಲೆಂಡ್‌ ಯುವ ತಂಡ: 81.3 ಓವರ್‌ಗಳಲ್ಲಿ 309; ಭಾರತ ಯುವ ತಂಡ: 58.1 ಓವರ್‌ಗಳಲ್ಲಿ 279(ವಿಹಾನ್‌ ಮಲ್ಹೋತ್ರಾ 120, ಆಯುಶ್‌ ಮ್ಹಾತ್ರೆ 80; ರಾಲ್ಫೀ ಅಲ್ಬರ್ಟ್‌ 6ಕ್ಕೆ53). ಎರಡನೇ ಇನಿಂಗ್ಸ್‌: ಇಂಗ್ಲೆಂಡ್‌ ಯುವ ತಂಡ: 25 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 93.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.