ADVERTISEMENT

ನಿಷೇಧದ ವಿರುದ್ಧ ಉಮರ್‌ ಮೇಲ್ಮನವಿ

ಪಿಟಿಐ
Published 19 ಮೇ 2020, 19:30 IST
Last Updated 19 ಮೇ 2020, 19:30 IST
ಉಮರ್ ಅಕ್ಮಲ್‌
ಉಮರ್ ಅಕ್ಮಲ್‌   

ಕರಾಚಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಉಮರ್ ಅಕ್ಮಲ್‌, ತಮ್ಮ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಹೇರಿದ್ದ ಮೂರು ವರ್ಷಗಳ ನಿಷೇಧವನ್ನು ಪ್ರಶ್ನಿಸಿ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ. ಬುಕ್ಕಿಯೊಬ್ಬರು ಸಂಪರ್ಕಿಸಿದ್ದನ್ನು ಮುಚ್ಚಿಟ್ಟಿದ್ದ ಹಿನ್ನೆಲೆಯಲ್ಲಿ ಪಿಸಿಬಿ, ಉಮರ್‌ ವಿರುದ್ಧ ಈ ಕ್ರಮ ಕೈಗೊಂಡಿತ್ತು.

‘ಪ್ರಕರಣದ ವಿಚಾರಣೆಗೆ ಪಿಸಿಬಿ ಸ್ವತಂತ್ರ ಸಮಿತಿಯೊಂದನ್ನು ನೇಮಕ ಮಾಡಲಿದೆ’ ಎಂದು ಕ್ರೀಡಾ ವೆಬ್‌ಸೈಟ್‌ ಜಿಯೊ ವರದಿ ಮಾಡಿದೆ. ತಮ್ಮ ಪರವಾಗಿ ವಾದಿಸಲು ಉಮರ್‌ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಸಂಸದೀಯ ವ್ಯವಹಾರ ಇಲಾಖೆಯಲ್ಲಿ ಸಲಹೆಗಾರರಾಗಿರುವ ಬಾಬರ್‌ ಅವಾನ್‌ ಒಡೆತನದ ಕಾನೂನು ಸಂಸ್ಥೆಯ ನೆರವನ್ನು ಪಡೆಯುತ್ತಿದ್ದಾರೆ.

ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಬುಕ್ಕಿ ಸಂಪರ್ಕಿಸಿದ್ದನ್ನು ಮುಚ್ಚಿಟ್ಟ ಪ್ರಕರಣದಲ್ಲಿ ಪಿಸಿಬಿಯ ಶಿಸ್ತು ಸಮಿತಿಯು ಉಮರ್‌ ವಿರುದ್ಧ, ಹೋದ ತಿಂಗಳು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧ ಹೇರಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.