ADVERTISEMENT

Under-19 Asia Cup: ಸ್ಫೋಟಕ ಬ್ಯಾಟಿಂಗ್ ಮೂಲಕ ಸೂರ್ಯವಂಶಿಯನ್ನೇ ಮೀರಿಸಿದ ಕುಂಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 11:26 IST
Last Updated 16 ಡಿಸೆಂಬರ್ 2025, 11:26 IST
<div class="paragraphs"><p>ಚಿತ್ರ:&nbsp;@cricbuzz</p></div>
   

ಚಿತ್ರ: @cricbuzz

ದುಬೈ: ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾ ಕಪ್ 2025ರ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತದ 17 ವರ್ಷದ ಎಡಗೈ ಬ್ಯಾಟರ್ ಅಭಿಗ್ಯಾನ್ ಕುಂಡು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.   

19 ವರ್ಷದೊಳಗಿನವರ ವಿಭಾಗದಲ್ಲಿ ಈಗಾಗಲೇ ವೈಭವ್ ಸೂರ್ಯವಂಶಿ ಹಾಗೂ ಆಯುಷ್ ಮ್ಹಾತ್ರೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಸಾಲಿಗೆ ಮತ್ತೊಬ್ಬ ಭಾರತೀಯ ಆಟಗಾರ ಸೇರಿಕೊಂಡಿದ್ದಾರೆ. 

ADVERTISEMENT

ಅಭಿಗ್ಯಾನ್ ಕುಂಡು ಅವರು 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದರು. ಇವರ ಸ್ಫೋಟಕ ದ್ವಿಶತಕದ ನೆರವಿನಿಂದ ಭಾರತ ತಂಡ 7 ವಿಕೆಟ್‌ ನಷ್ಟಕ್ಕೆ 408 ರನ್‌ ಗಳಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಆಯುಷ್ ಮ್ಹಾತ್ರೆ 14 ರನ್ ಗಳಿಸಿ ಔಟ್ ಆದರು. ಇನ್ನೋರ್ವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್​ಗಳ ನೆರವಿನಿಂದ 50 ರನ್​ ಕಲೆ ಹಾಕಿ ಔಟ್ ಆದರು.

ಬಳಿಕ 5ನೇ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಅಭಿಗ್ಯಾನ್ ಕುಂಡು 44 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 80 ಎಸೆತಗಳಲ್ಲಿ ಶತಕ ಹಾಗೂ 121 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಅಂತಿಮವಾಗಿ ಅವರು, 125 ಎಸೆತಗಳಲ್ಲಿ 17 ಬೌಂಡರಿ 9 ಸಿಕ್ಸರ್​ಗಳ ಸಹಿತ 209 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ದ್ವಿಶತಕ ಸಿಡಿಸಿದ 2ನೇ ಆಟಗಾರ

ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎಂಬ ಸಾಧನೆಯನ್ನು ಮಾಡಿದರು.

ಅಂಡರ್‌ 19 ಏಕದಿನ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರು

  • ಯಾರಿಕ್ ವನ್ ಶಾಲ್ಕ್‌ವಿಕ್ (ದಕ್ಷಿಣ ಆಫ್ರಿಕಾ) –215 ರನ್‌

  • ಅಭಿಗ್ಯಾನ್ ಕುಂಡು (ಭಾರತ) – 209* ರನ್‌

  • ಹಸಿತಾ ಬೊಯಗೊಡಾ (ಶ್ರೀಲಂಕಾ) –191‌ ರನ್‌

  • ಜೇಕಬ್ ಭುಲಾ (ನ್ಯೂಜಿಲೆಂಡ್) –180 ರನ್‌ 

  • ಥಿಯೋ ಡೊರೊಪೌಲೊಸ್ (ಆಸ್ಟ್ರೇಲಿಯಾ)– 179* ರನ್‌ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.