ADVERTISEMENT

ಕ್ರಿಕೆಟ್‌ಗೆ ಉಪುಲ್ ತರಂಗ ವಿದಾಯ

ಪಿಟಿಐ
Published 23 ಫೆಬ್ರುವರಿ 2021, 14:46 IST
Last Updated 23 ಫೆಬ್ರುವರಿ 2021, 14:46 IST
ಉಪುಲ್ ತರಂಗ–ಎಎಫ್‌ಪಿ ಚಿತ್ರ
ಉಪುಲ್ ತರಂಗ–ಎಎಫ್‌ಪಿ ಚಿತ್ರ   

ಕೊಲಂಬೊ: ಶ್ರೀಲಂಕಾದ ಅನುಭವಿ ಆಟಗಾರ ಉಪುಲ್ ತರಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ತರಂಗ, ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದರು. ಕೆಲವು ಪಂದ್ಯಗಳಲ್ಲಿ ತಂಡದ ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.

2005ರಲ್ಲಿ ಭಾರತ ವಿರುದ್ಧದ ಟೆಸ್ಟ್‌ ಪಂದ್ಯದೊಂದಿಗೆ ತರಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2017ರಲ್ಲಿ ಪಲ್ಲೆಕೆಲೆಯಲ್ಲಿ ಅದೇ ತಂಡದ ವಿರುದ್ಧ ಅವರು ಕೊನೆಯ ಟೆಸ್ಟ್ ಆಡಿದ್ದರು.

'ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ,' ಎಂದು ತರಂಗ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ರಾಷ್ಟ್ರೀಯ ತಂಡದ ಪರ ತರಂಗ, 31 ಟೆಸ್ಟ್ ಪಂದ್ಯಗಳಲ್ಲಿ 1754 ರನ್ ಗಳಿಸಿದ್ದರು. ಅದರಲ್ಲಿ ಮೂರು ಶತಕ ಮತ್ತು ಐದು ಅರ್ಧಶತಕಗಳಿವೆ.

235 ಏಕದಿನ ಪಂದ್ಯಗಳಲ್ಲಿ15 ಶತಕಗಳುಳ್ಳ 6951 ರನ್, 26 ಟಿ20 ಪಂದ್ಯಗಳಿಂದ 407 ರನ್ ಕಲೆಹಾಕಿದ್ದಾರೆ. ತರಂಗ ಕಡೇ ಏಕದಿನ ಪಂದ್ಯ ಆಡಿದ್ದು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.