
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆಲ್‌ರೌಂಡರ್ ಸುವೀಕ್ ಗಿಲ್ (35) ಅವರ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ಅಂತಿಮ ದಿನವಾದ ಮಂಗಳವಾರ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ 5 ವಿಕೆಟ್‌ಗೆ 243 ರನ್ ಗಳಿಸಿದ್ದ ಕರ್ನಾಟಕ ತಂಡವು 105.1 ಓವರ್‌ಗಳಲ್ಲಿ 314 ರನ್‌ಗಳಿಗೆ ಆಲೌಟ್ ಆಯಿತು. ಅದರೊಂದಿಗೆ, ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ 22 ರನ್ ಮುನ್ನಡೆ ಪಡೆಯಿತು.
ಬಳಿಕ, ಎರಡನೇ ಇನಿಂಗ್ಸ್‌ನಲ್ಲಿ ಬಿರುಸಿನ ಆಟವಾಡಿದ ಮಧ್ಯಪ್ರದೇಶ ತಂಡವು 31 ಓವರ್‌ಗಳಲ್ಲಿ 4 ವಿಕೆಟ್‌ಗೆ 149 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಕುಶಾಗ್ರ ನಗರ್ 75 ಎಸೆತಗಳಲ್ಲಿ 79 ರನ್ ಸಿಡಿಸಿದರು. ಗೆಲುವಿಗೆ 128 ರನ್ ಗುರಿ ಪಡೆದ ಆರುಷ್ ಜೈನ್ ಪಡೆಯು ದಿನದಾಟದ ಅಂತ್ಯಕ್ಕೆ 22 ಓವರ್‌ಗಳಲ್ಲಿ 1 ವಿಕೆಟ್‌ಗೆ 65 ರನ್ ಗಳಿಸಿತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ 3 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಮಧ್ಯಪ್ರದೇಶ ತಂಡಕ್ಕೆ 1 ಅಂಕ ಸಿಕ್ಕಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮಧ್ಯಪ್ರದೇಶ: 292; ಕರ್ನಾಟಕ: 105.1 ಓವರುಗಳಲ್ಲಿ 314 (ಆರ್ಯಸಿಂಹ್ ಚಾವ್ಡಾ 67, ಸುವಿಕ್ ಗಿಲ್ 35; ರಿತೀಕ್ ಪಾರಬ್ 87ಕ್ಕೆ3, ನೈತಿಕ್ ಜೈನ್ 100ಕ್ಕೆ3); ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 31 ಓವರುಗಳಲ್ಲಿ 4ಕ್ಕೆ 149 ಡಿ. (ಕುಶಾಗ್ರ ನಗರ್ 79, ಆರ್ಣವ್ ಮಸೀಹ ಔಟಾಗದೇ 33, ಆರುಷ್ ಜೈನ್ 32ಕ್ಕೆ2); ಕರ್ನಾಟಕ: 22 ಓವರುಗಳಲ್ಲಿ 1ಕ್ಕೆ 65 (ಆರ್.ರೋಹಿತ್ ರೆಡ್ಡಿ ಔಟಾಗದೇ 27, ಆರುಷ್ ಜೈನ್ ಔಟಾಗದೇ 30). ಫಲಿತಾಂಶ: ಪಂದ್ಯ ಡ್ರಾ; ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕಕ್ಕೆ 3 ಅಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.