
ಬೆಂಗಳೂರು: ಎಡಗೈ ಸ್ಪಿನ್ನರ್ ಸುವಿಕ್ ಗಿಲ್ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೊದಲ ದಿನವಾದ ಸೋಮವಾರ ಗೋವಾ ತಂಡವನ್ನು 160 ರನ್‌ಗಳಿಗೆ ಕಟ್ಟಿಹಾಕಿತು. ಬಳಿಕ ಬ್ಯಾಟಿಂಗ್‌ನಲ್ಲಿಯೂ ಪಾರಮ್ಯ ಸಾಧಿಸಿದ ಆರೂಷ್ ಜೈನ್ ಬಳಗವು ದಿನದಾಟದ ಅಂತ್ಯಕ್ಕೆ 33 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 154 ರನ್ ಗಳಿಸಿದೆ.
ರಾಯಪುರದ ಆರ್‌ಡಿಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಗೋವಾ ತಂಡಕ್ಕೆ ಸುವಿಕ್ (32ಕ್ಕೆ5) ಹಾಗೂ ಸುಕೃತ್ ಜೆ. (27ಕ್ಕೆ3) ಆಘಾತ ನೀಡಿದರು. ಆರಂಭ ಆಟಗಾರ ಅದೀಪ್ ಮಿಸ್ಕಿನ್ (68) ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ದೀರ್ಘ ಇನಿಂಗ್ಸ್ ಬೆಳೆಸುವಲ್ಲಿ ವಿಫಲರಾದರು. ಗೋವಾ 55 ಓವರ್‌ಗಳಲ್ಲಿ ಸರ್ವಪತನ ಕಂಡಿತು.
ಇನಿಂಗ್ಸ್ ಆರಂಭಿಸಿದ ರಾಜ್ಯ ತಂಡಕ್ಕೆ ಆರಂಭ ಆಟಗಾರರಾದ ನಿರಂಜನ್ ಅಶೋಕ್ (ಔಟಾಗದೇ 72) ಹಾಗೂ ಆರ್. ರೋಹಿತ್ ರೆಡ್ಡಿ (ಔಟಾಗದೇ 78) ಅವರು ಅಜೇಯ ಅರ್ಧಶತಕಗಳೊಂದಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ಇನಿಂಗ್ಸ್ ಬಾಕಿ ಚುಕ್ತಾಕ್ಕೆ 6 ರನ್ ಅಗತ್ಯವಿದ್ದು, ಬೃಹತ್ ಮುನ್ನಡೆ ಪಡೆಯುವತ್ತ ಆರೂಷ್ ಪಡೆ ಚಿತ್ತ ನೆಟ್ಟಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಗೋವಾ: 55 ಓವರ್‌ಗಳಲ್ಲಿ 160 (ಅದೀಪ್ ಮಿಸ್ಕಿನ್ 68; ಸುವಿಕ್ ಗಿಲ್ 32ಕ್ಕೆ5, ಸುಕೃತ್ ಜೆ. 27ಕ್ಕೆ3). ಕರ್ನಾಟಕ: 33 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 154 (ನಿರಂಜನ್ ಅಶೋಕ್ ಔಟಾಗದೇ 72, ಆರ್. ರೋಹಿತ್ ರೆಡ್ಡಿ ಔಟಾಗದೇ 78).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.