ADVERTISEMENT

ಕರ್ನಾಟಕ ತಂಡಕ್ಕೆ ಶ್ರೇಯಸ್‌ ಉಪನಾಯಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 15:29 IST
Last Updated 12 ಡಿಸೆಂಬರ್ 2024, 15:29 IST
ಶ್ರೇಯಸ್‌ ಗೋಪಾಲ್‌
ಶ್ರೇಯಸ್‌ ಗೋಪಾಲ್‌   

ಬೆಂಗಳೂರು: ಮಯಂಕ್‌ ಅಗರವಾಲ್‌ ಅವರು ಇದೇ 21ರಿಂದ ಅಹಮದಾಬಾದ್‌ನಲ್ಲಿ ಆರಂಭವಾಗುವ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ಋತುವಿನಲ್ಲಿ ಕೇರಳ ತಂಡಕ್ಕಾಗಿ ಆಡಿ, ಈ ವರ್ಷ ಕರ್ನಾಟಕ ತಂಡಕ್ಕೆ ವಾಪಸಾಗಿರುವ ಶ್ರೇಯಸ್‌ ಗೋಪಾಲ್‌ ಅವರಿಗೆ ಉಪನಾಯಕನ ಹೊಣೆ ನೀಡಲಾಗಿದೆ. ಅವರು ಮನೀಷ್ ಪಾಂಡೆ ಸ್ಥಾನವನ್ನು ತುಂಬಲಿದ್ದಾರೆ. ಪಾಂಡೆ ಅವರನ್ನು ತಂಡದಿಂದ ಕೈಬಿಡಲಾಗಿದೆ

‘ಸಿ’ ಗುಂಪಿನಲ್ಲಿರುವ ಕರ್ನಾಟಕ ತಂಡವು ಪುದುಚೇರಿ, ಪಂಜಾಬ್, ಅರುಣಾಚಲ ಪ್ರದೇಶ, ಹೈದರಾಬಾದ್, ಸೌರಾಷ್ಟ್ರ ಮತ್ತು ನಾಗಾಲ್ಯಾಂಡ್ ತಂಡಗಳನ್ನು ಎದುರಿಸುವ ಮೊದಲು ಮುಂಬೈ ವಿರುದ್ಧ ಅಭಿಯಾನ ಆರಂಭಿಸಲಿದೆ.

ADVERTISEMENT

ತಂಡ ಹೀಗಿದೆ: ಮಯಂಕ್ ಅಗರವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಎಸ್‌.ಜೆ. ನಿಕಿನ್ ಜೋಸ್, ಅನೀಶ್ ಕೆ.ವಿ, ಸ್ಮರಣ್‌ ಆರ್, ಕೆ.ಎಲ್. ಶ್ರೀಜಿತ್ (ವಿಕೆಟ್‌ ಕೀಪರ್‌), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವೈಶಾಖ ವಿಜಯ್‌ಕುಮಾರ್, ಕೌಶಿಕ್ ವಿ, ವಿದ್ಯಾಧರ್ ಪಾಟೀಲ, ಕಿಶನ್ ಎಸ್. ಬೆದರೆ , ಅಭಿಲಾಷ್ ಶೆಟ್ಟಿ, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ (ವಿಕೆಟ್‌ ಕೀಪರ್‌). ಕೋಚ್: ಯೆರ್ರೆ ಗೌಡ. ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್. ಫೀಲ್ಡಿಂಗ್ ಕೋಚ್: ಶಬರೀಶ್ ಪಿ ಮೋಹನ್. ಮ್ಯಾನೇಜರ್‌: ಎ. ರಮೇಶ್ ರಾವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.