ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿನೋದ್ ಕಾಂಬ್ಳಿ
–ಪಿಟಿಐ ಸಂಗ್ರಹ ಚಿತ್ರ
ಠಾಣಾ: ಮೂತ್ರನಾಳದ ಸೋಂಕಿಗಾಗಿ ಭಿವಂಡಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕ್ರಿಕೆಟ್ ತಾರೆ ವಿನೋದ್ ಕಾಂಬ್ಳಿ ಅವರಿಗೆ ಮಂಗಳವಾರ ಜ್ವರ ಕಾಣಿಸಿಕೊಂಡಿದೆ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರ ತಂಡ ತಿಳಿಸಿದೆ.
ಶನಿವಾರ 52 ವರ್ಷ ವಯಸ್ಸಿನ ಆಟಗಾರನನ್ನು ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಈ ಹಿಂದೆ ನಡೆಸಲಾದ ಸರಣಿ ಪರೀಕ್ಷೆಗಳಲ್ಲಿ ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರಿಗೆ ಎಂಆರ್‌ಐ ಸ್ಕ್ಯಾನಿಂಗ್ ನಡೆಸಲು ಡಾ.ವಿವೇಕ್ ತ್ರಿವೇದಿ ನೇತೃತ್ವದ ವೈದ್ಯರ ತಂಡ ಯೋಚಿಸಿತ್ತು. ಆದರೆ ಜ್ವರ ಕಾಣಿಸಿಕೊಂಡ ಕಾರಣ ಎಂಆರ್‌ಐ ನಂತರ ನಡೆಸಲು ನಿರ್ಧರಿಸಲಾಗಿದೆ.
ಅವರನ್ನು ಒಂದೆರಡು ದಿನಗಳಲ್ಲಿ ಐಸಿಯುನಿಂದ ಸ್ಥಳಾಂತರಿಸಿ, ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಎಂದು ಡಾ.ತ್ರಿವೇದಿ ತಿಳಿಸಿದ್ದಾರೆ
ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ರಕ್ತದೊತ್ತಡದಲ್ಲೂ ಏರಿಳಿತ ಆಗುತಿತ್ತು. ಮುಂದಿನ 24 ಗಂಟೆ ಅವರ ದೇಹಸ್ಥಿತಿ ಮೇಲೆ ಇಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.