ADVERTISEMENT

ವಿರಾಟ್‌ ಹೆಬ್ಬೆರಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 14:47 IST
Last Updated 13 ಜೂನ್ 2019, 14:47 IST
ಭಾರತ ತಂಡದ ಫಿಸಿಯೊ ಪ್ಯಾಟ್ರಿಕ್‌ ಫರ್ಹಾತ್‌, ವಿರಾಟ್‌ ಕೊಹ್ಲಿ ಹೆಬ್ಬೆರಳಿಗೆ ‘ಮ್ಯಾಜಿಕ್‌ ಸ್ಪ್ರೇ’ ಹಾಕುತ್ತಿರುವುದು –ಎಪಿ/ಪಿಟಿಐ ಚಿತ್ರ
ಭಾರತ ತಂಡದ ಫಿಸಿಯೊ ಪ್ಯಾಟ್ರಿಕ್‌ ಫರ್ಹಾತ್‌, ವಿರಾಟ್‌ ಕೊಹ್ಲಿ ಹೆಬ್ಬೆರಳಿಗೆ ‘ಮ್ಯಾಜಿಕ್‌ ಸ್ಪ್ರೇ’ ಹಾಕುತ್ತಿರುವುದು –ಎಪಿ/ಪಿಟಿಐ ಚಿತ್ರ   

ಸೌತಾಂಪ್ಟನ್‌ (ಪಿಟಿಐ): ವಿಶ್ವಕಪ್‌ನಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿರುವ ಭಾರತ ತಂಡಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾಗುತ್ತಿವೆ.

ಶನಿವಾರ ಏಜೀಲ್‌ ಬೌಲ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ನಾಯಕ ವಿರಾಟ್‌ ಕೊಹ್ಲಿ ಅವರ ಬಲಗೈ ಹೆಬ್ಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ.

ತಕ್ಷಣವೇ ಅಂಗಳಕ್ಕೆ ಧಾವಿಸಿದ ಫಿಸಿಯೊ ಪ್ಯಾಟ್ರಿಕ್‌ ಫರ್ಹಾತ್‌, ಹೆಬ್ಬೆರಳಿಗೆ ನೋವು ನಿವಾರಕವನ್ನು (ಮ್ಯಾಜಿಕ್‌ ಸ್ಪ್ರೇ) ಹಾಕಿದರು. ಬಳಿಕ ಗಾಯಗೊಂಡ ಭಾಗಕ್ಕೆ ಟೇಪ್‌ ಸುತ್ತಿದರು.

ADVERTISEMENT

ನಂತರ ಕೊಹ್ಲಿ, ಹಿಮಗಡ್ಡೆ ತುಂಬಿದ್ದ ಪ್ಲಾಸ್ಟಿಕ್‌ ಲೋಟದಲ್ಲಿ ಹೆಬ್ಬೆರಳು ಅದ್ದಿಕೊಂಡು ಅಂಗಳ ತೊರೆದ ದೃಶ್ಯ ಕಂಡುಬಂತು.

ಇದಕ್ಕೂ ಮುನ್ನ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರು ಮೊಣಕೈ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ನ್ಯೂಜಿಲೆಂಡ್‌ ಎದುರಿನ ಅಭ್ಯಾಸ ಪಂದ್ಯದಿಂದ ಹಿಂದೆ ಸರಿದಿದ್ದರು.

ಗಾಯದಿಂದ ಚೇತರಿಸಿಕೊಂಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌, ಶನಿವಾರ ನೆಟ್ಸ್‌ನಲ್ಲಿ ಸಾಕಷ್ಟು ಹೊತ್ತು ಬೆವರು ಹರಿಸಿದರು. ಇತರ ಆಟಗಾರರೂ ತಾಲೀಮಿನಲ್ಲಿ ಭಾಗಿಯಾಗಿದ್ದರು. ಭಾನುವಾರ ಕೊಹ್ಲಿ ಬಳಗವು ಅಭ್ಯಾಸದಿಂದ ದೂರ ಉಳಿಯಿತು.

ಜೂನ್‌ 5ರಂದು ನಡೆಯುವ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.