ADVERTISEMENT

ವೆಸ್ಟ್ ಇಂಡೀಸ್ ಪ್ರವಾಸ ಹೊರಡುವ ಮುನ್ನ ಸುದ್ದಿಗೋಷ್ಠಿ ನಡೆಸಲಿದ್ದಾರೆ ಕೊಹ್ಲಿ 

ಏಜೆನ್ಸೀಸ್
Published 28 ಜುಲೈ 2019, 13:28 IST
Last Updated 28 ಜುಲೈ 2019, 13:28 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ಭಾರತೀಯ ಕ್ರಿಕೆಟ್ ತಂಡ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಸೋಮವಾರ ಮುಂಬೈಯಿಂದ ಹೊರಡಲಿದೆ.ಹೊರಡುವ ಮುನ್ನ ನಾಳೆ (ಜುಲೈ 29)ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಅಮೆರಿಕ ಪ್ರವಾಸಕ್ಕೆ ಮುನ್ನ ಕೊಹ್ಲಿ ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು.ಆದರೆ ಅವರು ಸೋಮವಾರ ಸಂಜೆ 6 ಗಂಟೆಗೆ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ನಂತರವೇ ಪ್ರವಾಸ ಹೊರಡಲಿದ್ದಾರೆ ಎಂದಿದೆ ಬಿಸಿಸಿಐ.

ಆಗಸ್ಟ್ 3ನೇ ತಾರೀಖಿನಿಂದ ಪ್ಲೋರಿಡಾದಲ್ಲಿ ಭಾರತ ಎರಡು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ.ಆಮೇಲೆ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ.ಟೀಂ ಇಂಡಿಯ ಮೂರು ಟಿ-ಟ್ವೆಂಟಿ ಮತ್ತು 2 ಟೆಸ್ಟ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ADVERTISEMENT

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಡುವೆ ಶೀತಲಸಮರವೇರ್ಪಟ್ಟಿದೆ ಎಂಬ ವದಂತಿ ಹಬ್ಬಿದ್ದರ ಜತೆಗೆ ಕೊಹ್ಲಿ ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂಬ ಸುದ್ದಿ ಕೇಳಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.