ADVERTISEMENT

ಹೊನಲು–ಬೆಳಕಿನ ಟೆಸ್ಟ್‌ಗೆ ಕೊಹ್ಲಿ ಒಪ್ಪಿಗೆ: ಗಂಗೂಲಿ

ಪಿಟಿಐ
Published 25 ಅಕ್ಟೋಬರ್ 2019, 19:45 IST
Last Updated 25 ಅಕ್ಟೋಬರ್ 2019, 19:45 IST
ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮತ್ತು ಮೊಹಮ್ಮದ್ ಅಜರುದ್ದೀನ್  –ಪಿಟಿಐ ಚಿತ್ರ
ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮತ್ತು ಮೊಹಮ್ಮದ್ ಅಜರುದ್ದೀನ್  –ಪಿಟಿಐ ಚಿತ್ರ   

ಕೋಲ್ಕತ್ತ: ವಿರಾಟ್ ಕೊಹ್ಲಿ ಅವರು ಹೊನಲು–ಬೆಳಕಿನ ಟೆಸ್ಟ್ ಪಂದ್ಯಗಳಲ್ಲಿ ಆಡುವುದನ್ನು ವಿರೋಧಿಸುತ್ತಾರೆನ್ನುವ ಮಾತುಗಳು ಸುಳ್ಳು. ಈ ಮಾದರಿಗೆ ಅವರ ಸಹಮತವಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಶುಕ್ರವಾರ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಸನ್ಮಾನ ಸ್ವೀಕರಿಸಿದ ಅವರು, ‘ಟೆಸ್ಟ್ ಮಾದರಿಯ ಜನಪ್ರಿಯತೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ. ನಾವೆಲ್ಲರೂ ಸೇರಿ ಇದಕ್ಕೊಂದು ರೂಪುರೇಷೆ ರಚಿಸಬೇಕು. ಹೊನಲು ಬೆಳಕಿನಲ್ಲಿ ಟೆಸ್ಟ್ ಆಯೋಜನೆಯ ಬಗ್ಗೆ ನನಗಂತೂ ಉತ್ಕಟ ಒಲವಿದೆ. ಈ ಕುರಿತು ಶೀಘ್ರ ನಿರ್ಧರಿಸುತ್ತೇವೆ’ ಎಂದರು.

‘ಹಿತಾಸಕ್ತಿ ಸಂಘರ್ಷ ನಿಯಮವು ಕ್ರಿಕೆಟ್‌ ಉತ್ಕೃಷ್ಠತೆಯನ್ನು ಹೆಚ್ಚಿಸುವಂತಿರಬೇಕು. ವಿವಿಎಸ್ ಲಕ್ಷ್ಮಣ್, ಸುನಿಲ್ ಗಾವಸ್ಕರ್, ಕಪಿಲ್ ದೇವ್, ಅಜರುದ್ದೀನ್ ಅವರಂತಹ ಹಲವಾರು ಕ್ರಿಕೆಟಿಗರ ಅನುಭವ ಮತ್ತು ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ನಿಯಮ ಸಹಕಾರಿಯಾಗಬೇಕು. ಅದರ ಬದಲಾಗಿ ಅವರನ್ನೇಲ್ಲ ಕಳೆದುಕೊಳ್ಳುವಂತಾಗಬಾರದು’ ಎಂದು ಗಂಗೂಲಿ ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.